
ಹಿರಿಯೂರು :
ಧ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿರುವ ವಾಯುದೇವರ ಅವತಾರವೆಂದು ಹೇಳಲಾಗುವ ಈ ದೇಶ ಕಂಡಂತಹ ಅತ್ಯಂತ ಶ್ರೇಷ್ಠ ಸಂತರು ಹಾಗೂ ತತ್ವಜ್ಞಾನಿಗಳಾದ ಮಧ್ವಾಚಾರ್ಯರ ತತ್ವ ಮತ್ತು ಆದರ್ಶಗಳು ಸರ್ವಕಾಲೀಕವಾದವುಗಳು ಎಂಬುದಾಗಿ ಉಪತಹಶೀಲ್ದಾರರಾದದ ಕೆ.ಬಿ.ತಿಪ್ಪೇಸ್ವಾಮಿ ಹೇಳಿದರು.

ನಗರದ ತಾಲೂಕು ಕಚೇರಿಯಲ್ಲಿ ಬುಧವಾರದಂದು ತಾಲೂಕು ಆಡಳಿತ ಮತ್ತು ಚಿತ್ರದುರ್ಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರುಗಳ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಧ್ವಾಚಾರ್ಯ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ, ನಂತರ ಅವರು ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಬ್ರಾಹ್ಮಣ ಸಮಾಜದ ಅಧ್ಯಕ್ಷ ಸ್ವಾಮಿನಾಥನ್, ಪ್ರಶಾಂತ್ ಜೋಯಿಸ್ ವೆಂಕಟೇಶ್ ದೀಕ್ಷಿತ್, ಶ್ರೀನಿವಾಸರಾವ್, ರಘುನಂದನ್, ವಿಶ್ವೇಶ್ವರ, ಡಿ.ಆರ್.ಗೀತಾ, ಪುರುಷೋತ್ತಮ್, ಇಂದಿರಮ್ಮ, ಬಿಇಒ ಕಚೇರಿಯ ನಾಗರಾಜ್, ತೋಟಗಾರಿಕೆ ಇಲಾಖೆಯ ಮಂಜುನಾಥ್, ಕಂದಾಯ ಇಲಾಖೆಯ ಶ್ರೀನಿವಾಸ್ ರೆಡ್ಡಿ, ಸುದೀಪ್, ಪೊಲೀಸ್ ಇಲಾಖೆ ಅನಿಲ್ ಕುಮಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
