October 27, 2026
0003

ಹಿರಿಯೂರು :

ರಾಜರ ಆಡಳಿತದ ಕಾಲದಲ್ಲಿ ಆಯುಧಗಳನ್ನು ಸದಾ ಯುದ್ಧಕ್ಕೆ ಸನ್ನದ್ಧವಾಗಿ ಇಟ್ಟುಕೊಳ್ಳುತ್ತಿದ್ದರು, ಆಯುಧಗಳು ಜನರನ್ನು ರಕ್ಷಣೆ ಮಾಡುವ ಪ್ರಮುಖ ಸಾಧನಗಳಾಗಿದ್ದರಿಂದ ಹಬ್ಬದ ದಿನ ಶುಚಿಗೊಳಿಸಿ, ಪೂಜಿಸಲಾಗುತ್ತಿದೆ, ಇದು ಹಿಂದುಗಳ ಅರ್ಥಪೂರ್ಣ ಸಾಂಸ್ಕೃತಿಕ ಹಬ್ಬ ಎಂಬುದಾಗಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಹ ಕಾರ್ಯದರ್ಶಿ ಜಿ.ವೆಂಕಟೇಶ್ ಹೇಳಿದರು.

ನಗರದ ಪ್ರಧಾನ ರಸ್ತೆಯಲ್ಲಿರುವ ಸತ್ಯನಾರಾಯಣ ದೇವಸ್ಥಾನದಲ್ಲಿ ಬುಧವಾರದಂದು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಆಯುಧಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಸುರಕ್ಷಾ ಪ್ರಮುಖ ಚೇತನ್ ಆಲೂರು, ಕಾರ್ಯದರ್ಶಿ ಎಸ್.ರಾಘವೇಂದ್ರ  ಟಿ.ಬಿ.ಸರ್ಕಲ್, ಸಂಯೋಜಕ ಧನುಷ್, ಜಿ.ಪ್ರಶಾಂತ್, ಜಿ.ದೇಸಾಯಿ, ನಾರಾಯಣರೆಡ್ಡಿ, ಪ್ರಭಾಕರ್, ಚಿನ್ಮಯ್, ತ್ಯಾಗರಾಜ್, ನಾಗೇಂದ್ರ ಇತರರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *