October 25, 2026
0002

ಹಿರಿಯೂರು :

ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಹಿರಿಯೂರು ತಾಲ್ಲೂಕಿನಲ್ಲಿ ಶೇ.65.21 ರಷ್ಟು ಮತದಾನವಾಗಿದೆ, ತಾಲೂಕಿನ ನಾಲ್ಕು ಹೋಬಳಿ ಕೇಂದ್ರಗಳಲ್ಲಿ ಸ್ಥಾಪಿಸಿದ್ದ 10 ಮತಗಟ್ಟೆಗಳಲ್ಲಿ ಪದವೀಧರ ಮತದಾರರು ತಮ್ಮ ಹಕ್ಕು ಚಲಾಯಿಸಿದರು.

ತಾಲೂಕಿನಲ್ಲಿ ಒಟ್ಟು 7,606 ಮತದಾರರಿದ್ದು, 4389 ಪುರುಷರು ಹಾಗೂ 3217 ಮಹಿಳಾ ಮತದಾರರಿದ್ದಾರೆ, ಕಸಬಾ ಹೋಬಳಿಯಲ್ಲಿ 3690, ಧರ್ಮಪುರದಲ್ಲಿ 1323 ಜವಗೊಂಡನಹಳ್ಳಿಯಲ್ಲಿ 1169 ಹಾಗೂ ಐಮಂಗಳ ಹೋಬಳಿಯಲ್ಲಿ ಒಂದು 1424 ಮತದಾರರಿದ್ದಾರೆ.

ಹಿರಿಯೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಐದು, ಧರ್ಮಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡು, ಐಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡು ಹಾಗೂ ಜವಗೊಂಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದು ಮತಗಟ್ಟೆ ಸ್ಥಾಪಿಸಲಾಗಿತ್ತು.

ತಾಲೂಕಿನಲ್ಲಿ ಮಹಿಳಾ ಮತದಾರರು ಶೇ.66.58 ರಷ್ಟು ಮತ ಚಲಾಯಿಸಿದ್ದು, ಪುರುಷರ ಮತದಾನ ಪ್ರಮಾಣ ಶೇಕಡ 64.21ರಷ್ಟಿದೆ. ಈ ಮೂಲಕ ಮಹಿಳೆಯರು ಮತದಾನದಲ್ಲಿ ಪುರುಷರಿಗಿಂತ ಹೆಚ್ಚಿನ ಮುನ್ನಡೆಯನ್ನು ಸಾಧಿಸಿದ್ದಾರೆ.

About The Author

Leave a Reply

Your email address will not be published. Required fields are marked *