
ಹಿರಿಯೂರು :
ತುಂಗಾ ಜಲಾಶಯದ ಹಿನ್ನೀರು ಪ್ರದೇಶದ ಚಿಕ್ಕಮಗಳೂರು ಜಿಲ್ಲೆ ಎನ್ ಆರ್ ಪುರ ತಾಲೂಕಿನ ಮುತ್ತಿನಕೊಪ್ಪ ಗ್ರಾಮದ ಬಳಿಯಲ್ಲಿ ಕಾಲುವೆ ಇಂಟೆಕ್ ಕೆನಾಲ್ ಹಾಗೂ ನಾಲ್ಕು ಕಿಲೋಮೀಟರ್ ವರೆಗೆ ಅಂದರೆ ಕೆ ಕಣಬೊರು ವರೆಗೆ ಕಾಮಗಾರಿ ಸಂಪೂರ್ಣವಾಗಿ ಮುಗಿದಿದೆ, ವಾಣಿವಿಲಾಸ ಸಾಗರ ಹಾಗೂ ಭದ್ರ ಮೇಲ್ದಂಡೆ ಅಚ್ಚುಕಟ್ಟುದಾರ ರೈತರ ಹಿತರಕ್ಷಣ ಸಮಿತಿ ಅಧ್ಯಕ್ಷ ಕಸವನಹಳ್ಳಿರಮೇಶ್ ತಿಳಿಸಿದ್ದಾರೆ.
ವಿವಿಸಾಗರ ಹಾಗೂ ಭದ್ರ ಮೇಲ್ದಂಡೆ ಅಚ್ಚುಕಟ್ಟುದಾರ ರೈತರ ಹಿತರಕ್ಷಣ ಸಮಿತಿ ನೇತೃತ್ವದಲ್ಲಿ ತುಂಗಾದಿಂದ ತುಂಗ-ಭದ್ರಾ ಜಲಾಶಯದ ಇಂದಿನವರೆಗೆ ನಡೆದಿರುವ ಕಾಮಗಾರಿ ಮತ್ತು ಬಾಕಿ ಇರುವ ಕಾಮಗಾರಿ ವೀಕ್ಷಣೆ ಮಾಡಿದ ನಂತರ ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಅದೇ ಹಾದಿಯಲ್ಲಿ ಸೇತುವೆಗಳು, ಸ್ಥಳೀಯವಾಗಿ ಬೀಳುವ ಮಳೆ ನೀರು, ಹರಿಯುವ ಸೂಪರ್ ಪ್ಯಾಸೇಜ್ ಹಾಗೂ ಆ ಪ್ರದೇಶದಲ್ಲಿ ಬರುವ ವಿದ್ಯುತ್ ಗೋಪುರಗಳು , ವಿದ್ಯುತ್ ಮಾರ್ಗಗಳು ಸಂಪೂರ್ಣವಾಗಿ ಮುಗಿದಿವೆ,ನಾಲ್ಕು ಕಿಲೋಮೀಟರ್ ನಂತರ ಕೆ.ಕಣಬೊರು ಗ್ರಾಮದ ಸಮೀಪ ನಿರ್ಮಿಸಿರುವ ಮೊದಲನೇ ಪಂಪ ಹೌಸ್ ಸಿವಿಲ್ ಕಾಮಗಾರಿಗಳು ಬಹುತೇಕ ಮುಗಿದಿವೆ.
ವಿದ್ಯುತ್ ಗೋಪುರಗಳು ಹಾಗೂ ವಿದ್ಯುತ್ ಲೈನ್ ನಿರ್ಮಾಣವಾಗಿವೆ ಅದರ ಜೊತೆಯಲ್ಲಿ ಸಬ್ ಸ್ಟೇಷನ್ ಕಾಮಗಾರಿ ಸಂಪೂರ್ಣವಾಗಿ ಮುಗಿದಿದ್ದು. ಅದರ ಸಂಪರ್ಕ ಜೋಡಣೆ ಕೆಲಸ ಬಾಕಿ ಇರುತ್ತದೆ ಅಲ್ಲದೆ ಮೊದಲನೇ ಪಂಪ್ ಹೌಸ್ ಕಟ್ಟಡ ನಿರ್ಮಾಣ ಮುಗಿದಿದ್ದು ಇಂಟೆಕ್ ಕೆನಾಲ್ ಕಾಮಗಾರಿ ಸಂಪೂರ್ಣವಾಗಿ ಮುಗಿದಿದೆ ಅದರ ಜೊತೆಯಲ್ಲಿ ನೀರನ್ನು ಪಂಪ್ ಮಾಡುವ ಮೋಟರ್ ಪಂಪ್ ಸ್ಟಾರ್ಟ್ ಕೆಲಸಗಳು ಮುಗಿದಿವೆ ಒಳಾಂಗಣದಲ್ಲಿ ಸಿವಿಲ್ ಕಾಮಗಾರಿಗಳು ಮುಗಿದಿವೆ.
ವಿವಿಸಾಗರ ಹಾಗೂ ಭದ್ರ ಮೇಲ್ದಂಡೆ ಅಚ್ಚುಕಟ್ಟುದಾರ ರೈತರ ಹಿತರಕ್ಷಣ ಸಮಿತಿ ಅಧ್ಯಕ್ಷರಾದ ಕಸವನ್ನಹಳ್ಳಿ ರಮೇಶ್ ನೇತೃತ್ವದಲ್ಲಿ ತುಂಗಾದಿಂದ ಭದ್ರಾ ಜಲಾಶಯದ ಇಂದಿನವರೆಗೆ ನಡೆದಿರುವ ಕಾಮಗಾರಿ ಮತ್ತು ಬಾಕಿ ಇರುವ ಕಾಮಗಾರಿ ವೀಕ್ಷಣೆ ಮಾಡಲಾಯಿತು.

ಮೊದಲನೇ ಪಂಪ್ ಹೌಸ್ ಮುಂಭಾಗದಲ್ಲಿ ಡೆಲಿವರಿ ಚೇಂಬರ್ 1 ನಿರ್ಮಾಣವಾಗಿರುತ್ತದೆ. ಬಾಕಿ ಉಳಿದಿರುವ ಕಾಮಗಾರಿಗಳೆಂದರೆ ವಿದ್ಯುತ್ ಮೋಟಾರ್ಗಳಿಂದ ಸ್ಟಾರ್ಟರ್ ಗಳಿಗೆ ವಿದ್ಯುತ್ ಜೋಡಣೆ ವೈರಿಂಗ್ ಬಾಕಿ ಇರುತ್ತದೆ.. ನಂತರ ಅಲ್ಲಿಂದ 7.5 ಕಿಲೋಮೀಟರ್ ಸಾಗಿದರೆ ಸಾತು ಕೋಳಿ ಗ್ರಾಮದ ಬಳಿ ಎರಡನೇ ಪಂಪ ಹೌಸ್ ಕಾಮಗಾರಿ ಸಿವಿಲ್ ಕೆಲ್ಸಗಳು ಮುಗಿದಿವೆ
ವಿದ್ಯುತ್ ಗೋಪುರಗಳು ನಿರ್ಮಾಣವಾಗಿವೆ ವಿದ್ಯುತ್ ಲೈನ್ಗಳು ಸಹ ಎಳೆಯಲಾಗಿದೆ ಅದೇ ರೀತಿ ಪಂಪ ಹೌಸ್ ಕಟ್ಟಡದ ಸಿವಿಲ್ ಕಾಮಗಾರಿಗಳು ಮುಗಿದಿವೆ ಮೋಟರ್ ಪಂಪ್ ಕಾಮಗಾರಿಗಳು ಸಂಪೂರ್ಣವಾಗಿ ಮುಗಿದಿವೆ ಅಲ್ಲದೆ ಡೆಲಿವರಿ ಚೇಂಬರ್- 2 ಕಾಮಗಾರಿ ಸಹ ಮುಗಿದೋಗಿರುತ್ತದೆ ಅದೇ ರೀತಿ ಸಬ್ ಸ್ಟೇಷನ್ ಕಾಮಗಾರಿ ಮುಗಿದಿರುತ್ತದೆ ವಿದ್ಯುತ್ ಪರಿವರ್ತಕಗಳ ಜೋಡಣೆ ಸಹ ಆಗಿರುತ್ತದೆ
ಸಣ್ಣಪುಟ್ಟ ವೈರಿಂಗ್ ಕೆಲಸಗಳು, ಜೋಡಣೆಗಳು ಬಾಕಿ ಇದ್ದು, ಅಲ್ಲಲ್ಲಿ ಚಾನಲ್ ಗೆ ಸಂಬಂಧಪಟ್ಟ ಸಿಮೆಂಟ್ ಲೈನಿಂಗ್ ಕೆಲಸ ಬಾಕಿ ಇರುತ್ತದೆ. ಅಲ್ಲಿಂದ ಮುಂದಕ್ಕೆ ಸುಮಾರು ಅರ್ಧ ಕಿ.ಮೀ ಹೆಚ್ಚು ಕಾಮಗಾರಿಯಲ್ಲಿ ಸಿಮೆಂಟ್ ಲೈನಿಂಗ್ ಕಾಮಗಾರಿ ಬಾಕಿ ಇರುತ್ತದೆ ಅಲ್ಲದೆ ಅದೇ ಮಾರ್ಗದಲ್ಲಿ ಆನೆಗಳು ಹುಲಿ ಚಿರತೆಗಳು ಇತರೆ ಕಾಡುಪ್ರಾಣಿಗಳು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹಾದು ಹೋಗಲು ದೊಡ್ಡದಾದ ಸೇತುವೆಗಳು ಸಹ ನಿರ್ಮಾಣವಾಗಿವೆ.
ಕಾಲುವೆಯಲ್ಲಿ ಇಳಿದು ನೀರು ಕುಡಿಯಲು ಸೋಪಾನದ ರೀತಿಯಲ್ಲಿ ಸಿಮೆಂಟ್ ನಲ್ಲಿ ನಿರ್ಮಿಸಲಾಗಿದೆ. ಅಲ್ಲಿಂದ ಮುಂದಕ್ಕೆ ಅರ್ಧ ಕಿ.ಮೀ ಸುರಂಗ ಮಾರ್ಗ ನಿರ್ಮಾಣವಾಗಿದೆ. ಅದರಿಂದ ಮುಂದಕ್ಕೆ ಸ್ವಲ್ಪ ಕೆಲಸ ಬಾಕಿ ಇರುತ್ತವೆ. ಒಟ್ಟಾರೆ ಭದ್ರಾ ಮೇಲ್ದಂಡೆ ಯೋಜನೆಯ ಮೊದಲನೇ ಪ್ಯಾಕೇಜ್ ನ ತುಂಗಾ ಜಲಾಶಯದ ಹಿನ್ನಿರಿನಿಂದ ಭದ್ರಾ ಜಲಾಶಯದ ಹಿನ್ನೀರು ಪ್ರದೇಶದ ವೆರಿಗು ಸುಮಾರು 12 ಕಿಲೋಮೀಟರ್ ಕಾಮಗಾರಿ ಬಹುತೇಕ ಮುಗಿದಿದ್ದು
ಈ ಭಾಗದಲ್ಲಿ ಕಾಮಗಾರಿ ಮಾಡುವಾಗ ವರ್ಷದ 12 ತಿಂಗಳಲ್ಲಿ ಆರು ತಿಂಗಳು ಮಳೆ ಬರುತ್ತದೆ ಮೂರು ತಿಂಗಳು ಕಾಲುವೆಯಲ್ಲಿ ತುಂಬಿರುವ ನೀರು ಮತ್ತು ಕೆಸರು ಮಣ್ಣನ್ನು ಡಿ ವಾಟರಿಂಗ್ ಮತ್ತು ಡಿ ಸಿಲ್ಟಿಂಗ್ ಮಾಡಲು ಸಮಯ ತೆಗೆದುಕೊಳ್ಳುತ್ತದೆ ಉಳಿದ ಮೂರು ತಿಂಗಳ ಮಾತ್ರ ಕಾಮಗಾರಿ ಮಾಡಲು ಸಾಧ್ಯವಾಗುತ್ತದೆ. ಬಾಕಿ ಉಳಿದಿರುವ ವಿದ್ಯುತ್ ವೈರಿಂಗ್ ಕೆಲಸಗಳು ಬೇಗ ಬೇಗ ಮುಗಿಯಬಹುದು ಆದರೆ ಸಿಮೆಂಟ್ ಲೈನಿಂಗ್ ಕೆಲಸಗಳು ನಿಧಾನ ಗತಿಯಲ್ಲಿ ನಡೆಯುತ್ತವೆ.
ಒಟ್ಟಾರೆ ನಾವಲ್ಲಿ ನೋಡಿದಾಗ ನಿರಂತರವಾಗಿ ಕೆಲಸ ಮಾಡಿದರೆ ಮೂರ್ನಾಲ್ಕು ತಿಂಗಳಲ್ಲಿ ಕೆಲಸ ಪೂರೈಸಿ ಮುಂದಿನ ಏಪ್ರಿಲ್ ಮೇ ತಿಂಗಳಲ್ಲಿ ಪಶ್ಚಿಮ ಘಟ್ಟಗಳಲ್ಲಿ ಬೀಳುವ ಮಳೆ ನೀರನ್ನು ಭದ್ರಾ ಜಲಾಶಯದ ಹಿನ್ನೆರಿಗೆ ತಲುಪಿಸಬಹುದು. ಆದರೆ ಸಿಮೆಂಟ್ ಲೈನಿಂಗ್ ಕೆಲಸ ತ್ರಾಸದಾಯಕ.
ಈ ಬಗ್ಗೆ ಈ ಯೋಜನೆಯ ಫಲಾನುಭವಿಗಳಾದ ನಾವುಗಳು ಕೇವಲ ಪತ್ರಿಕಾಗೋಷ್ಠಿ, ಮನವಿ ಪತ್ರ ಕೊಡುವುದು. ಮಂತ್ರಿ ಮಹೋದಯ ಸಿಕ್ಕಿದಾಗ ಮನವಿ ಮಾಡುವುದು ಬಿಟ್ಟು ಈ ತುಂಗಾ ಜಲಾಶಯ ಕಾಮಗಾರಿ ಪ್ರದೇಶದಲ್ಲಿ ವೀಕ್ಷಣೆ ಮಾಡಬೇಕು . ಇವತ್ತಿನ ಕಾಮಗಾರಿ ವೀಕ್ಷಣೆ ಮಾಡಿ ಪ್ರಸ್ತುತಿಯನ್ನು ಅಧ್ಯಯನ ಮಾಡಬೇಕು ಎಂದು ಈ ಮೂಲಕ ಸಾರ್ವಜನಿಕರಲ್ಲಿ ನಿವೇದಿಸುತ್ತೇವೆ.
ಇದೇ ರೀತಿ ಆಮೆ ಗತಿಯಲ್ಲಿ ಕಾಮಗಾರಿಗಳು ನಡೆದರೆ ಮುಂದಿನ ವರ್ಷ ನೀರು ಬರುವುದು ಅನುಮಾನ. ಆಡಳಿತ ಪಕ್ಷಗಳು 2028ರ ಚುನಾವಣೆಗೆ ಇದನ್ನು ಅಸ್ತ್ರವನ್ನಾಗಿ ಮಾಡಿಕೊಳ್ಳಬಹುದು. ಇವತ್ತಿನ ನಮ್ಮ ಜೊತೆಯಲ್ಲಿ ದೊಡ್ಡಘಟ್ಟ ಗುರುಮೂರ್ತಿ, ಉಪಸ್ಥಿತರಿದ್ದರು.
