October 27, 2026
000001

ಹಿರಿಯೂರು :

ದಸರಾ ಹಬ್ಬದ ಅಂತಿಮ ದಿನವಾದ ವಿಜಯದಶಮಿಯಂದು ನಗರದ ಸಂತೆಮೈದಾನದಲ್ಲಿರುವ ಬನ್ನಿ ಮಂಟಪದ ಬಳಿ ಬುಧವಾರ ಸಂಜೆ ತಾಲ್ಲೂಕು ತಹಶೀಲ್ದಾರರಾದ ಎಂ.ಸಿದ್ದೇಶ್ ರವರು ಸಾಂಪ್ರದಾಯಿಕ ವೇಷಧರಿಸಿ, ಬನ್ನಿ ಮಂಟಪಕ್ಕೆ ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆಯಲ್ಲಿ ತಂದಿದ್ದ ಬಿಲ್ಲು ಬಾಣವನ್ನು ಬಿಲ್ಲಿನ ಹೆದೆಗೆ ಬಾಣ ಹೂಡಿ, ಹೊಡೆಯುವ ಮೂಲಕ ಅಂಬಿನೋತ್ಸವಕ್ಕೆ ಚಾಲನೆ ನೀಡಿದರು.

ಬನ್ನಿ ಮಂಟಪದ ಆವರಣಕ್ಕೆ ಶ್ರೀತೇರುಮಲ್ಲೇಶ್ವರಸ್ವಾಮಿ, ಶ್ರೀಮೈಲಾರಲಿಂಗೇಶ್ವರಸ್ವಾಮಿ, ಶ್ರೀರಾಜಾದುರ್ಗಾಪರಮೇಶ್ವರಿ,  ಶ್ರೀರೇವಣ್ಣಸಿದ್ದೇಶ್ವರಸ್ವಾಮಿ, ಶ್ರೀಬೀರಲಿಂಗೇಶ್ವರಸ್ವಾಮಿ, ಶ್ರೀಭದ್ರಕಾಳೇಶ್ವರಿದೇವಿ, ಶ್ರೀಬನಶಂಕರಿದೇವಿ, ಶ್ರೀಮಾರಮ್ಮದೇವಿ, ಶ್ರೀಕರಿಮಾರಿಯಮ್ಮ ದೇವಿ, ಶ್ರೀಚೌಡೇಶ್ವರಿದೇವಿ, ಶ್ರೀಹುಲಿಗಮ್ಮದೇವಿ, ಶ್ರೀಗೌಸಂದ್ರಮಾರಮ್ಮ, ಶ್ರೀಹೊಸೂರಾಂಭದೇವಿ, ಶ್ರೀಪೌದಿಯಮ್ಮ, ಶ್ರೀಬೇವಿನಹಳ್ಳಮ್ಮ, ಸೇರಿದಂತೆ ನಗರದ ವಿವಿಧ ದೇವರುಗಳನ್ನು ಭಕ್ತರು ಚರ್ಮವಾದ್ಯಗಳ ಮೆರವಣಿಗೆಯಲ್ಲಿ ಕರೆತಂದರು.

ಈ ಅಂಬಿನೋತ್ಸವದಲ್ಲಿ ನಗರಸಭೆ ಪೌರಾಯುಕ್ತರಾದ ಎ.ವಾಸೀಂ, ಬನ್ನಿಮಂಟಪ ಸಮಿತಿಯ ಅಧ್ಯಕ್ಷ ರಾಜಪ್ಪ, ಮುಖಂಡರಾದ ರವೀಂದ್ರಪ್ಪ, ಕಾಡುಗೊಲ್ಲರ ಸಂಘದ ರಾಜ್ಯ ಘಟಕದ ಅಧ್ಯಕ್ಷ ರಾಜಣ್ಣ, ಸುಹಾಸ್ ಸುಧಾಕರ್, ಆರ್.ನಾಗೇಂದ್ರ ನಾಯ್ಕ್, ಭೋಜಣ್ಣ, ಜಗದೀಶ್ ಭಂಡಾರಿ, ವೆಂಕಟೇಶ್, ಸತ್ಯನಾರಾಯಣಮೂರ್ತಿ, ಹಾಗೂ ನಗರಸಭೆ ಮಾಜಿ ಸದಸ್ಯರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳು ಭಾಗವಹಿಸಿದ್ದರು.

About The Author

Leave a Reply

Your email address will not be published. Required fields are marked *