October 24, 2026
0003

ಹಿರಿಯೂರು :

ತಾಲೂಕಿನ ಐಮಂಗಲ ಹೋಬಳಿ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನವಂಬರ್ 3ರಂದು ಮಂಗಳವಾರ ಗೊಲ್ಲಹಳ್ಳಿಯ ಜಾಗೃತಿ ಶಿಕ್ಷಣ ಸಂಸ್ಥೆ (ಜೆಟ್ ಸಿಬಿಎಸ್ಸಿ ಸ್ಕೂಲ್)ಯಲ್ಲಿ ಏರ್ಪಡಿಸಲಾಗಿದ್ದು, ಈ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಪ್ರೊ. ಸಲವಮ್ಮನಹಳ್ಳಿ ಸಿದ್ದೇಶ್ ಗೌಡರನ್ನು ಅಧಿಕೃತವಾಗಿ ಆಹ್ವಾನಿಸಲಾಯಿತು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಿರಿಯೂರು ಹಾಗೂ ಐಮಂಗಳ ಹೋಬಳಿ ಘಟಕದ ವತಿಯಿಂದ ನಡೆಯುವ ಈ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಪ್ರೊ. ಸಲವಮ್ಮನಹಳ್ಳಿ ಸಿದ್ದೇಶ್ ಗೌಡ ರವರನ್ನು ತುಮಕೂರಿನ ಅವರ ನಿವಾಸದಲ್ಲಿ ಭೇಟಿ ಮಾಡಿ, ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಹ್ವಾನಿಸಲಾಗಿದೆ.

ಈ ಸಂದರ್ಭದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸಿ.ರಾಮಚಂದ್ರಪ್ಪ, ಕೋಶಾಧ್ಯಕ್ಷರಾದ ಜಿ.ಪ್ರೇಮ್ ಕುಮಾರ್. ತಾಲೂಕು ಮಾಜಿ ಅಧ್ಯಕ್ಷರು ಹಾಗೂ ಜಿಲ್ಲಾ ಸಲಹಾ ಸಮಿತಿ ಸದಸ್ಯರಾದ ಹರ್ತಿಕೋಟೆ ಮಹಾಸ್ವಾಮಿ, ಐಮಂಗಲ ಹೋಬಳಿ ಘಟಕದ ಅಧ್ಯಕ್ಷರಾದ ಪಿ.ತಿಪ್ಪೇಸ್ವಾಮಿ, ಕೋಶಾಧ್ಯಕ್ಷರಾದ ಮಲ್ಲಿಕಾರ್ಜುನ್,  ಜೆಟ್ ಸಿಬಿಎಸ್‌.ಸಿ ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಚಂದ್ರಶೇಖರ್, ಕಾರ್ಯದರ್ಶಿ ಎನ್.ಗಿರಿಜಾ ಚಂದ್ರಶೇಖರ್, ಗೌರವ ಕಾರ್ಯದರ್ಶಿ ಕರಿಓಬನಹಳ್ಳಿ  ಪ್ರಹ್ಲಾದ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *