
ಹಿರಿಯೂರು :
ತಮಿಳುನಾಡಿನಲ್ಲಿ ಮೊನ್ನೆ ನಡೆದ ಚುನಾವಣೆಯಲ್ಲಿ ದಳಪತಿ ವಿಜಯ್ ಸಾರಥ್ಯದಲ್ಲಿ ಟಿವಿಕೆ ಪಕ್ಷವು ಮತದಾರರಿಗೆ ಹಣ ಹಂಚಿಕೆ ಮಾಡದೇ ಅನೂಹ್ಯ ಗೆಲುವು ಸಾಧಿಸಿದ್ದು, ಇದು ಪ್ರಜಾಪ್ರಭುತ್ವದ ಗೆಲುವೆಂದು ಖ್ಯಾತ ಕಾದಂಬರಿಕಾರ ಡಿ.ಸಿ.ಪಾಣಿ ವರ್ಣಿಸಿದ್ದಾರೆ.
ಜಾತಿ ಮತ್ತು ಧರ್ಮಗಳು ಸಹ ಈ ಚುನಾವಣೆಯಲ್ಲಿ ಮುನ್ನೆಲೆಗೆ ಬಂದಿಲ್ಲ ಎಂಬುದು ಗಮನಿಸಬೇಕಾದ ಮತ್ತೊಂದು ಮುಖ್ಯವಾದ ಅಂಶ ಎಂಬುದಾಗಿ ಅವರು ವಿಶ್ಲೇಷಣೆ ಮಾಡಿದ್ದಾರೆ.
ಚುನಾವಣೆಗಳಲ್ಲಿ ಹಣ ಜಾತಿ ಹಾಗೂ ಧರ್ಮ ಗೌಣವಾದಾಗ ಈ ದೇಶದ ಅರ್ಧ ಸಮಸ್ಯೆಗಳು ತಾವಾಗಿಯೇ ಪರಿಹಾರವಾಗಲಿವೆ ಎಂಬ ಭವ್ಯ ಭಾರತದ ಕನಸನ್ನು ಅವರು ಹೊಂದಿದ್ದಾರೆ.
