
ಹಿರಿಯೂರು :
ಶಾಲೆಯ ಪ್ರಾರಂಭವು ಸಂತಸದಾಯಕವಾಗಿದ್ದರೆ ವರ್ಷದ ಎಲ್ಲಾ ದಿನಗಳು ಸಡಗರ ಸಂಭ್ರಮದಿಂದ ನಡೆಯುತ್ತವೆ ಎಂಬ ಉದ್ದೇಶದಿಂದ ವಿದ್ಯಾರ್ಥಿಗಳನ್ನು ಪುಷ್ಪವೃಷ್ಟಿ ಮಾಡುವ ಮೂಲಕ ಶಾಲೆಗೆ ಸ್ವಾಗತಿಸಲಾಗುತ್ತಿದೆ, ಈ 2026-27 ನೇ ಸಾಲಿನ ಶೈಕ್ಷಣಿಕ ವರ್ಷವು ಎಲ್ಲರಿಗೂ ಶುಭವನ್ನು ಉಂಟುಮಾಡಲಿ ಎಂಬುದಾಗಿ ಮೋಕ್ಷಗುಂಡಂ ವಿಶ್ವೇಶ್ವರಯ್ಯ ವಿದ್ಯಾಸಂಸ್ಥೆ ಅಧ್ಯಕ್ಷರಾದ ಎಂ.ಬಸವರಾಜ್ ಹೇಳಿದರು.
ನಗರದ ಶ್ರೀಮೋಕ್ಷಗುಂಡಂ ವಿಶ್ವೇರಯ್ಯ ವಿದ್ಯಾಮಂದಿರದ ಆವರಣದಲ್ಲಿ 2026-27 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳನ್ನು ಶಾಲೆಗೆ ಪುಷ್ಪವೃಷ್ಟಿ ಮಾಡುವ ಮೂಲಕ ಸ್ವಾಗತಿಸಿ, ನಂತರ ಅವರು ಮಾತನಾಡಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಹೆಸರುಗಳನ್ನು ಬರೆದು ಹಾಕಿ, ಲಕ್ಕಿ ಡಿಪ್ ನಡೆಸಲಾಯಿತು. ಚೀಟಿಯಲ್ಲಿ ಹೆಸರು ಬಂದ ವಿದ್ಯಾರ್ಥಿಗಳನ್ನು ಲಕ್ಕಿ ಡ್ಟೂಡೆಂಟ್ ಎಂದು ಗುರುತಿಸಲಾಯಿತು. ಇದೇ ಸಂದರ್ಭದಲ್ಲಿ ನಗರದಲ್ಲಿ ವಿದ್ಯಾರ್ಥಿಗಳಿಂದ ಪಥಸಂಚಲನ ನಡೆಸಲಾಯಿತು.

ಈ ಕಾರ್ಯಕ್ರಮದಲ್ಲಿ ಮೋಕ್ಷಗುಂಡಂ ಶಾಲೆಯ ಕಾರ್ಯದರ್ಶಿ ಹೆಚ್.ಎಂ.ಬಸವರಾಜ್, ಖಜಾಂಚಿ ಸಣ್ಣಭೀಮಣ್ಣ, ನಿರ್ದೇಶಕರುಗಳಾದ ಕೆ.ಆರ್.ವೀರಭದ್ರಪ್ಪ, ರವಿಪ್ರಸಾದ್, ಮುಖ್ಯಶಿಕ್ಷಕರಾದ ಜಿ.ತಿಪ್ಪೇಸ್ವಾಮಿ ಸೇರಿದಂತೆ ಶಾಲಾ ಶಿಕ್ಷಕ-ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
