
ಹಿರಿಯೂರು :
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ರಾಜ್ಯಾದ್ಯಂತ ಪಕ್ಷವನ್ನು ಬಲಪಡಿಸುವ ಉದ್ದೇಶದಿಂದ ಪ್ರವಾಸವನ್ನು ಹಮ್ಮಿಕೊಂಡಿದ್ದು, ಅದರ ಭಾಗವಾಗಿ ಇದೇ ಮೇ 31 ಭಾನುವಾರ ಸಮಯ ಬೆಳಗ್ಗೆ 10.30 ಕ್ಕೆ ಹಿರಿಯೂರಿಗೆ ಆಗಮಿಸುತ್ತಿದ್ದು, ಹಿರಿಯೂರಿನ ಪ್ರವಾಸಿ ಮಂದಿರದಲ್ಲಿ ಸರ್ವ ಸದಸ್ಯರ ಸಭೆಯನ್ನು ಕರೆಯಲಾಗಿದೆ ಕೆ.ಆರ್.ಎಸ್. ಪಕ್ಷದ ತಾಲೂಕು ಅಧ್ಯಕ್ಷ ವಿನಯ್ ತಿಳಿಸಿದ್ದಾರೆ.
ಇದರ ನೇತೃತ್ವವನ್ನು ಕೆ.ಆರ್.ಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಎಸ್.ಮಂಜುನಾಥ್ ಅವರು ವಹಿಸಲಿದ್ದು, ರಾಜ್ಯ ಸಮಿತಿ ಅನೇಕ ಪದಾಧಿಕಾರಿಗಳು ಆಗಮಿಸಲಿದ್ದಾರೆ, ಹಾಗಾಗಿ ಕೆ.ಆರ್.ಎಸ್ ಪಕ್ಷದ ಸರ್ವಸದಸ್ಯರು ಮತ್ತು ಕೆ.ಆರ್.ಎಸ್ ಪಕ್ಷವನ್ನು ಬೆಂಬಲಿಸುವವರು ಮತ್ತು ಅಭಿಮಾನಿಗಳು ಮತ್ತು ಕನ್ನಡಪರ ಸಂಘಟನೆಗಳು, ರೈತಪರಸಂಘಟನೆಗಳು, ವಿದ್ಯಾರ್ಥಿಪರ ಸಂಘಟನೆಗಳು, ದಲಿತಪರ ಸಂಘಟನೆಗಳು ಮತ್ತು ಸಮಾಜಮುಖಿ ಚಿಂತಕರು ಆಗಮಿಸಬೇಕು
ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂಬುದಾಗಿ ಕೆ.ಆರ್.ಎಸ್. ಪಕ್ಷದ ಹಿರಿಯೂರು ತಾಲೂಕು ಅಧ್ಯಕ್ಷ ವಿನಯ್, ಉಪಾಧ್ಯಕ್ಷರಾದ ಯಶೋಧ, ಕಾರ್ಯದರ್ಶಿಯಾದ ದೇವರಾಜ್, ಪುಟ್ಟಮ್ಮ, ಜಬಿ ಹಾಗೂ ಪಕ್ಷದ ಕಾರ್ಯಕರ್ತರು ತಿಳಿಸಿದ್ದಾರೆ.
