May 31, 2026
03

ಹಿರಿಯೂರು :    

ನಗರದಿಂದ ಚಿತ್ರದುರ್ಗ ಕಡೆಗೆ ಕಿಷ್ಕಿಂದೆ ಅಂತಹ ಕೆ.ಎಸ್.ಆರ್.ಟಿ.ಸಿ ಬಸ್ ಸ್ಟಾಂಡ್ ನೆಹರು ಸರ್ಕಲ್, ಗಾಂಧಿ ಸರ್ಕಲ್ ವೇದಾವತಿ ನದಿ ತಾಲೂಕ ಕಚೇರಿ ದಾಟಿ ಟಿವಿ ಸರ್ಕಲ್ ಗೆ ಬರುವ ಸಮಯಕ್ಕೆ ಪ್ರಯಾಣಿಕ ಹೈರಾಣ ಆಗುತ್ತಾನೆ ಎಂಬುದಾಗಿ ಸಾಮಾಜಿಕ ಕಾರ್ಯಕರ್ತ ಕಸವನಹಳ್ಳಿ ರಮೇಶ್ ಬೇಸರ ವ್ಯಕ್ತಪಡಿಸಿದ್ದಾರೆ.

ರಸ್ತೆ ವಿಸ್ತರಣೆ ಗಗನಕುಸುಮವಾಗಿ ಹಿರಿಯೂರು ಮೂಲಕ ಸಂಚರಿಸುವ ಎಲ್ಲ ಪ್ರಯಾಣಿಕ ಬಂಧುಗಳಿಗೆ ವಿಪರೀತವಾದ ನೋವು ಕೊಡುವ ಹಿರಿಯೂರು ನಗರ ಪ್ರವೇಶ ಒಂದು ರೀತಿಯಲ್ಲಿ ಸಂಕಷ್ಟ ಪರಿಸ್ಥಿತಿ ನಿರ್ಮಾಣವಾಗಿದೆ. ಆಳುವವರ ನಿಷ್ಕಾಳಜಿ, ಅಧಿಕಾರಿಗಳ ಅಸಡ್ಡೆ, ಪ್ರಯಾಣಿಕರ ಆತುರ, ನಾಗರೀಕರ ನಿರ್ಲಕ್ಷ್ಯ, ಈ ಪ್ರಯಾಣವನ್ನು ಒಂದು ರೀತಿಯ ಗಜಗರ್ಭ ಪ್ರಸವ ಅನ್ನುವಂತಾಗಿದೆ.

ದಶಕಗಳ ಕನಸನ್ನು ಕನಸಾಗಿಯೇ ಉಳಿಸುವ ಬುದ್ಧಿವಂತಿಕೆಯ ಅಧಿಕಾರರೂಢ ಆಬದ್ಧತೆಯ ಜನರಿಂದ ದ್ವಿಚಕ್ರವಾಹನ, ಆಟೋ ಪ್ರಯಾಣಿಕರು ಚಾಲಕರು, ಬಸ್ ಟೆಂಪೋ ಪ್ರಯಾಣಿಕರು ಇದರಲ್ಲಿ ವಿಶೇಷವಾಗಿ ಬಡವರು ಕಾರಿನಲ್ಲಿ ಹೋಗುವವರು ಕಾರಿನ ಗ್ಲಾಸನ್ನು ಮುಚ್ಚಿ ತಮಷ್ಟಕ್ಕೆ ತಾವು ಪ್ರಯಾಣಿಸುತ್ತಾರೆ. ಇವರಿಗೆ ಬಿಸಿಲಾಗಲಿ ಧೂಳಾಗಲಿ ತಟ್ಟುವುದಿಲ್ಲ.

ಒಂದು ರೀತಿಯ ಮೇಲ್ವರ್ಗದ ನಿರ್ಲಕ್ಷತನ. ಇನ್ನು ಬಡವರ್ಗದವರಿಗೆ ಅನಿವಾರ್ಯವಾಗಿ ಧೂಳಿನ ಗಾಳಿ ಗುಂಡಿಯ ನೋವು ಬಿಸಿಲಿನ ತಾಪಮಾನ ಕೊಳಚೆ ನೀರಿನ ಸ್ನಾನ ಇವುಗಳನ್ನು ಪ್ರಶ್ನೆ ಮಾಡಲು ಸಮಯ ಎಲ್ಲಿದೆ ? ತುತ್ತಿನ ಚೀಲ ತುಂಬಿಸಿಕೊಳ್ಳಲು ದಾವಂತದಿಂದ ಎದ್ದೇವೋ ಬಿದ್ದೆವೋ ಎಂದು ಈ ನರಕ ಸದೃಶ್ಯ ಪ್ರಯಾಣವನ್ನು ಮುಗಿಸಬೇಕಾಗುತ್ತದೆ.

ಕೇಳಬೇಕಾದ ಮನಸ್ಸುಗಳು ಗೋಡೆ ಕಟ್ಟಿಕೊಂಡು ಕುಳಿತು ಬಿಟ್ಟಿವೆ ನಮಗ್ಯಾಕೆ ಈ ಉಸಾಬರಿ ಎನ್ನುವ ಈ ಸಮಾಜದ ನಾಗರೀಕರ ಧೋರಣೆಯಿಂದ ಇಂತಹ 10 ಹಲವಾರು ನೋವುಗಳನ್ನು ನಾವುಗಳು ಸಹಿಸಿಕೊಳ್ಳಬೇಕಾಗಿದೆ. ಹಗಲೆಲ್ಲ ಹೋರಾಟ ರಾತ್ರಿ ಎಲ್ಲಾ ತೂರಾಟ ಎನ್ನುವ ಕಾಲದಲ್ಲಿ ನಾವಿದ್ದೇವೆ.

ಮಹಿಳೆಯರು ವೃದ್ಧರು ಮಕ್ಕಳು ಗರ್ಭಿಣಿಯರು ಇತ್ತೀಚಿನ ದಿನಗಳಲ್ಲಿ ವಿಶೇಷವಾಗಿ ಎಲ್ಲರನ್ನೂ ಕಾಡುವ ಕಾಲು ನೋವು ಸೊಂಟ ನೋವು ಮೂಳೆ ನೋವುಗಳು ಜನರಿಗೆ ನೋವು ಕೊಟ್ಟರು ಸಹ ಕೆಲವೊಂದು ವೈದ್ಯರಿಗೆ ವರದಾನವಾಗುತ್ತಿವೆ. ಚುನಾವಣೆಯಲ್ಲಿ ನಿಮ್ಮೊಂದಿಗೆ ನಾವಿದ್ದೇವೆ ನಮ್ಮ ನಾಯಕರ ಕಡೆಗೆ ನಿಮ್ಮ ಪ್ರಯಾಣ ನಮ್ಮ ಪಕ್ಷ ನಿಮ್ಮ ಕಾಳಜಿ ಮಾಡುತ್ತದೆ.

ನೀವು ಹಣ ಪಡೆಯಿರಿ ಎಣ್ಣೆ ಹೊಡೆಯಿರಿ ಬಿರಿಯಾನಿ ತಿಂದು ಮಲಗಿಕೊಳ್ಳಿ ಎಂದು ಗಂಟಾನು ಘೋಷವಾಗಿ ಭಾಷಣ ಬಿಗಿದ ಬಿಷಣಕೋರರು ಎಲ್ಲಿ ಹೋದರು..? ಕನಿಷ್ಠ ಮೂಲಭೂತ ಸೌಲಭ್ಯಗಳ ಕಡೆಗೆ ಕಿಂಚಿತ್ತು ಕಣ್ಣು ಹಾಯಿಸದ ಐದು ವರ್ಷಕ್ಕೊಮ್ಮೆ ಬರುವ ಜನಪ್ರತಿನಿಧಿಗಳಿರಲಿ. ಒಂದು ವರ್ಷಕ್ಕೆ ಗುತ್ತಿಗೆ ಒಪ್ಪಂದ ಮಾಡಿಕೊಂಡು ಬಂದಿರುವ ಅಧಿಕಾರಿಗಳಿರಲಿ, ಸಾಮಾನ್ಯ ಜನರಿರಲಿ, ಸಂಘೇ ಶಕ್ತಿ ಎನ್ನುವ ವಸೂಲಿಕೋರರಿರಲಿ. ಇದರಡೆಗೆ ಕನಿಷ್ಠ ವಕ್ರ ದೃಷ್ಟಿ ಬೀರಿದರು ಸಹ ಈ ಸೇತುವೆ ಬೇಗ ನಿರ್ಮಾಣವಾಗುತ್ತದೆ.

ಭ್ರಷ್ಟಾಚಾರವನ್ನು ಜನ ಸಹಿಸಿಕೊಳ್ಳುತ್ತಾರೆ ಸ್ವಜನ ಪಕ್ಷಪಾತವನ್ನು ಪ್ರಶ್ನೆ ಮಾಡುವುದಿಲ್ಲ ಆದರೆ ಕನಿಷ್ಠ ರಸ್ತೆ ಕುಡಿಯುವ ನೀರು, ಚರಂಡಿ ಇಂತಹ ಅನಿವಾರ್ಯ ಕೆಲಸಗಳನ್ನು ಪೂರ್ಣ ಗುಣಮಟ್ಟ ಅಲ್ಲದಿದ್ದರೂ ಸಹ ಕನಿಷ್ಠ ನೋವು ರಹಿತ ಶೀಘ್ರ ಪ್ರಯಾಣಕ್ಕೆ ಅನುಕೂಲವಾಗುವಂತೆ ಮಾಡಿಕೊಡಬೇಕಾದ ಅನಿವಾರ್ಯತೆ ಇದೆ.

ಆದ್ದರಿಂದ ಈ ಬಗ್ಗೆ ಮುಂದಿನ ದಿನಗಳಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ಈ ಸೇತುವೆ ಬಳಿಯಲ್ಲಿ ಕುಳಿತು ಮಾಡಲು ತೀರ್ಮಾನಿಸಿದ್ದೇವೆ. ಆದ್ದರಿಂದ ಈ ಬಗ್ಗೆ ಸಂಬಂಧಪಟ್ಟವರು ತುರ್ತು ಕ್ರಮ ಕೈಗೊಂಡು ಸೇತುವೆ ನಿರ್ಮಾಣ ಮಾಡಿಸಬೇಕೆಂದು ಎಂಬುದಾಗಿ ಸಾಮಾಜಿಕ ಕಾರ್ಯಕರ್ತ ಕಸವನಹಳ್ಳಿ ರಮೇಶ್ ಒತ್ತಾಯಿಸಿದ್ದಾರೆ.

About The Author

Leave a Reply

Your email address will not be published. Required fields are marked *