
ಹಿರಿಯೂರು :
ನಮ್ಮ ತಂದೆಯವರಾದ ಸಚಿವ ಡಿ.ಸುಧಾಕರ್ ರವರಿಗೆ ನೀವೆಲ್ಲರೂ ತೋರಿದ ಪ್ರೀತಿ, ವಿಶ್ವಾಸ ಮತ್ತು ಬೆಂಬಲಕ್ಕೆ ಹೃದಯಪೂರ್ವಕ ಧನ್ಯವಾದಗಳು, ಮುಂದಿನ ದಿನಗಳಲ್ಲಿ ನೀವುಗಳು ನನ್ನ ಬೆಂಬಲಕ್ಕೆ ನಿಲ್ಲುವ ಮೂಲಕ ಕೈಹಿಡಿದು ಮುನ್ನಡೆಸಿ, ಇದೇ ಪ್ರೀತಿ, ಆಶೀರ್ವಾದ ಮತ್ತು ಸಹಕಾರವನ್ನು ನೀಡಬೇಕು ಎಂಬುದಾಗಿ ಸುಹಾಸ್ ಸುಧಾಕರ್ ಮನವಿ ಮಾಡಿದರು.
ತಾಲ್ಲೂಕಿನ ಹರಿಶ್ಚಂದ್ರ ಘಾಟ್ನಲ್ಲಿ ಸಾರ್ವಜನಿಕರ ಮನೆಗಳಿಗೆ ಭೇಟಿ ನೀಡಿ, ಅವರೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸಿ, ನಂತರ ಮಾತನಾಡಿದರು.
ನಿಮ್ಮೆಲ್ಲರ ವಿಶ್ವಾಸವೇ ನಮ್ಮ ಶಕ್ತಿ. ನಿಮ್ಮ ಆಶೀರ್ವಾದವೇ ನಮ್ಮ ಮುಂದಿನ ಪಯಣಕ್ಕೆ ಪ್ರೇರಣೆ, ನಿಮ್ಮ ಬೆಂಬಲ ನಮ್ಮ ಕುಟುಂಬದ ಮೇಲೆ ಸದಾ ಹೀಗೆ ಇರಲಿ, ನಿಮ್ಮೆಲ್ಲರ ಸೇವೆಗೆ ಸದಾ ನಮ್ಮ ಕುಟುಂಬ ಸಿದ್ಧವಾಗಿರುತ್ತದೆ, ಎಂಬುದಾಗಿ ಸುಹಾಸ್ ಸುಧಾಕರ್ ಈ ಸಂದರ್ಭದಲ್ಲಿ ಭರವಸೆಯನ್ನು ನೀಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು, ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
