May 30, 2026
00002

ಹಿರಿಯೂರು :

ಸಚಿವ ಡಿ.ಸುಧಾಕರ್ ರವರು ತಾಲ್ಲೂಕಿನ ನೊಂದವರ, ಬಡವರ, ಹಿಂದುಳಿದವರ ಬಾಳಿಗೆ ಆಶಾಕಿರಣವಾಗಿದ್ದರು, ನೊಂದು ಬಂದ ಜನರನ್ನು ಎಂದು ಹಿಂದಕ್ಕೆ ಕಳುಹಿಸುತ್ತಿರಲಿಲ್ಲ, ಸಚಿವ ಡಿ.ಸುಧಾಕರ್ ರವರನ್ನು ಕಳೆದುಕೊಂಡು ಜನ ಅನಾಥರಾಗಿದ್ದಾರೆ ಎಂಬುದಾಗಿ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಗಾಯಿತ್ರಿ ಅಕ್ಕರವರು ಹೇಳಿದರು.

ನಗರದ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ದಿ॥ಡಿ.ಸುಧಾಕರ್ ರವರಿಗೆ ಭಾವಪೂರ್ಣ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ದಿ.ಡಿ.ಸುಧಾಕರ್ ರವರ ಭಾವಚಿತ್ರಕ್ಕೆ ನಮನ ಸಲ್ಲಿಸಿ, ನಂತರ ಅವರು ಮಾತನಾಡಿದರು.

ಸಚಿವ ಡಿ.ಸುಧಾಕರ್ ರವರ ಸುಪುತ್ರರಾದ ಸುಹಾಸ್ ಮಾತನಾಡಿ, ಸಮಾಜದಲ್ಲಿ ಶಾಂತಿ, ಸೌಹಾರ್ದತೆ, ಮಾನವೀಯ ಮೌಲ್ಯಗಳು ಮತ್ತು ಉತ್ತಮ ಚಿಂತನೆಗಳನ್ನು ಬೆಳೆಸುವಲ್ಲಿ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಂತಹ ಆಧ್ಯಾತ್ಮಿಕ ಕೇಂದ್ರಗಳ ಪಾತ್ರ ಬಹಳ ಮಹತ್ವದ್ದಾಗಿದ್ದು, ಇಂದು ಆ ಆಧ್ಯಾತ್ಮಿಕ ವಾತಾವರಣವನ್ನು ಅನುಭವಿಸುವ ಅವಕಾಶ ನನಗೆ ಸಿಕ್ಕಿದೆ ಎಂಬುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಸಚಿವ ಡಿ.ಸುಧಾಕರ್ ರವರ ಸುಪುತ್ರರಾದ ಸುಹಾಸ್ ರವರಿಗೆ ಶಾಲು ಹೊದಿಸಿ, ಸನ್ಮಾನಿಸಿ, ನೆನಪಿನ ಕಾಣಿಕೆ ನೀಡಿ, ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಸಚಿವ ಡಿ.ಸುಧಾಕರ್ ರವರ ಸುಪುತ್ರರಾದ ಸುಹಾಸ್ ಹಾಗು ಬ್ರಹ್ಮಕುಮಾರಿ ಈಶ್ವರಿ ವಿಶ್ವ ವಿದ್ಯಾಲಯದ ಗಾಯಿತ್ರಿ ಅಕ್ಕನವರು ಹಾಗು ವಕೀಲರಾದ ಹಚ್.ಪಿ.ಮಹಂತೇಶ್ ಮತ್ತು ಮಾಜಿ ನಗರ ಸಭೆ ಅಧ್ಯಕ್ಷರಾದ ಈ.ಮಂಜುನಾಥ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಈರಲಿಂಗೇಗೌಡ ಮತ್ತು ಮೊದಲಮರಿಯ ಹಾಗು ವಿಶ್ವನಾಥ್ ಹಾಗು ಇತರರು ಹಾಜರಿದ್ದರು.

About The Author

Leave a Reply

Your email address will not be published. Required fields are marked *