May 31, 2026
02

ಹಿರಿಯೂರು :

ತಮಿಳುನಾಡಿನಲ್ಲಿ ಮೊನ್ನೆ ನಡೆದ ಚುನಾವಣೆಯಲ್ಲಿ ದಳಪತಿ ವಿಜಯ್ ಸಾರಥ್ಯದಲ್ಲಿ ಟಿವಿಕೆ ಪಕ್ಷವು ಮತದಾರರಿಗೆ ಹಣ ಹಂಚಿಕೆ ಮಾಡದೇ ಅನೂಹ್ಯ ಗೆಲುವು ಸಾಧಿಸಿದ್ದು, ಇದು  ಪ್ರಜಾಪ್ರಭುತ್ವದ ಗೆಲುವೆಂದು ಖ್ಯಾತ ಕಾದಂಬರಿಕಾರ ಡಿ.ಸಿ.ಪಾಣಿ ವರ್ಣಿಸಿದ್ದಾರೆ.

ಜಾತಿ ಮತ್ತು ಧರ್ಮಗಳು ಸಹ ಈ ಚುನಾವಣೆಯಲ್ಲಿ ಮುನ್ನೆಲೆಗೆ ಬಂದಿಲ್ಲ ಎಂಬುದು ಗಮನಿಸಬೇಕಾದ ಮತ್ತೊಂದು ಮುಖ್ಯವಾದ ಅಂಶ ಎಂಬುದಾಗಿ ಅವರು ವಿಶ್ಲೇಷಣೆ ಮಾಡಿದ್ದಾರೆ.

ಚುನಾವಣೆಗಳಲ್ಲಿ ಹಣ ಜಾತಿ ಹಾಗೂ ಧರ್ಮ ಗೌಣವಾದಾಗ ಈ ದೇಶದ ಅರ್ಧ ಸಮಸ್ಯೆಗಳು ತಾವಾಗಿಯೇ ಪರಿಹಾರವಾಗಲಿವೆ ಎಂಬ ಭವ್ಯ ಭಾರತದ ಕನಸನ್ನು ಅವರು ಹೊಂದಿದ್ದಾರೆ.  

About The Author

Leave a Reply

Your email address will not be published. Required fields are marked *