May 31, 2026
004

ಹಿರಿಯೂರು :

ತಾಲ್ಲೂಕಿನ ಜವಗೊಂಡನಹಳ್ಳಿ ಹೋಬಳಿಯ ಯಲ್ಲದಕೆರೆ ಪಂಚಾಯಿತಿ ವ್ಯಾಪ್ತಿಯ ಬಡಗೊಲ್ಲರಹಟ್ಟಿ ಮತ್ತು ಫಿಲಾಜನಹಳ್ಳಿ ಗ್ರಾಮದ ಯುವಮುಖಂಡರುಗಳು ಜೆಡಿಎಸ್ ಮುಖಂಡರಾದ ಎಂ.ರವೀಂದ್ರಪ್ಪನವರ ಮುಂಗಸವಳ್ಳಿ ತೋಟದ ನಿವಾಸಕ್ಕೆ ಭೇಟಿ ನೀಡಿ ಮುಂಬರುವ ಉಪಚುನಾವಣೆಯಲ್ಲಿ ನೀವು ಸ್ಪರ್ಧಿಸಬೇಕು ಎಂಬುದಾಗಿ ಒತ್ತಾಯಿಸಿದರು.

ಸ್ಥಳೀಯರಾದ ನೀವು ಈ ಚುನಾವಣೆಯಲ್ಲಿ ಗೆದ್ದು, ಶಾಸಕರಾದರೆ ನಮ್ಮ ಸ್ಥಳೀಯ ಸಮಸ್ಯೆಗಳಾದ ಕುಡಿಯುವ ನೀರು ಹಾಗೂ ನೀರಾವರಿ ಮತ್ತು ರಸ್ತೆಗಳದಾಂತ ಗಂಭೀರ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಂಡು ಅಭಿವೃದ್ಧಿಪಡಿಸಲು ಹೆಚ್ಚಿನ ಹೊತ್ತು ಕೊಡಬೇಕೆಂದು ಮನವಿ ಮಾಡಿದರಲ್ಲದೆ, ಸ್ಥಳೀಯ ಅಭ್ಯರ್ಥಿಯಾದ ನಿಮಗೆ ನಾವು ಎಲ್ಲಾ ರೀತಿಯ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.

ಜೆಡಿಎಸ್ ಮುಖಂಡರಾದ ಮಾನ್ಯ ರವೀಂದ್ರಪ್ಪನವರು ಮಾತನಾಡಿ, ಕಳೆದ ಚುನಾವಣೆಯಲ್ಲಿ ನಾನು ಸೋತಿದ್ದರೂ ಕ್ಷೇತ್ರ ಬಿಟ್ಟಿಲ್ಲ, ತಾಲೂಕಿನ ಅಭಿವೃದ್ಧಿಗೆ ಹಗಲು ಇರುಳು ಶ್ರಮವಹಿಸಿ ದುಡಿಯುತ್ತೇನೆ ಮತ್ತು ಹಿರಿಯೂರು ತಾಲೂಕನ್ನು ಅಭಿವೃದ್ಧಿ ಪತದತ್ತ ಕೊಂಡೊಯ್ಯಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂಬುದಾಗಿ ಈ ಸಂದರ್ಭದಲ್ಲಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಬಡಗೊಲ್ಲರಹಟ್ಟಿ ಮುಖಂಡರಾದ ದಾಸಪ್ಪ, ಮಹೇಶ್, ಲೋಕೇಶ್, ಮಹಾಂತೇಶ್, ಮಂಜುನಾಥ್, ಮತ್ತು ಪಿಲಾಜನಹಳ್ಳಿ ಮುಖಂಡರಾದ ಕುಮಾರಸ್ವಾಮಿ, ವಿಜಯಕುಮಾರ್, ನಾಗಣ್ಣ, ಹುಲುಗಲಕುಂಟೆ ಮುಖಂಡರಾದ ಉಮೇಶ್ ಮತ್ತು ರಾಘು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *