October 27, 2026
00004

ಹಿರಿಯೂರು:

ಹಿರಿಯೂರು ಪೊಲೀಸ್ ಠಾಣೆಗೆ ನೂತನವಾಗಿ ಆಗಮಿಸಿರುವ ದಕ್ಷತೆ ಹಾಗೂ ಪ್ರಾಮಾಣಿಕತೆ ಹಾಗೂ ಕರ್ತವ್ಯನಿಷ್ಠೆಗೆ ಹೆಸರಾದ ಜನಸ್ನೇಹಿ ಅಧಿಕಾರಿಗಳಾದ ಪೊಲೀಸ್ ಡಿ.ವೈ.ಎಸ್.ಪಿ. ಗೋಪಾಲಕೃಷ್ಣ ಹಾಗೂ ಆರಕ್ಷಕ ನಿರೀಕ್ಷಕರಾದ ಕೆ.ಎನ್.ಚಂದ್ರಶೇಖರ್ ರವರನ್ನು ಪ್ರೀತಿಯಿಂದ ಸ್ವಾಗತಿಸುತ್ತಿದ್ದೇವೆ ಎಂಬುದಾಗಿ ರೈತಸಂಘದ ಕಾರ್ಯಾಧ್ಯಕ್ಷರಾದ ಕೆ.ಸಿ.ಹೊರಕೇರಪ್ಪ ಹೇಳಿದರು.

ಹಿರಿಯೂರು ಪೊಲೀಸ್ ಠಾಣೆಗೆ ನೂತನವಾಗಿ ಆಗಮಿಸಿರುವ ಜನಸ್ನೇಹಿ ಅಧಿಕಾರಿಗಳಾದ ಪೊಲೀಸ್ ಡಿ.ವೈ.ಎಸ್.ಪಿ.ಗೋಪಾಲಕೃಷ್ಣ ಹಾಗೂ ಆರಕ್ಷಕ ನಿರಕ್ಷಕರಾದ ಚಂದ್ರಶೇಖರ್ ಅವರನ್ನು ಭೇಟಿಮಾಡಿ, ಶಾಲು ಹೊದಿಸಿ, ಪುಷ್ಪಮಾಲೆ ಹಾಕಿ ಹೃತ್ಪೂರ್ವಕವಾಗಿ ಸ್ವಾಗತಿಸಿ, ನಂತರ ಅವರು ಮಾತನಾಡಿದರು.

ಇದೇ ಸಂದರ್ಭದಲ್ಲಿ ತಾಲೂಕಿನ ಕೆಲವು ಆಗುಹೋಗುಗಳ ವಿಚಾರಗಳನ್ನು ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಅನೇಕ ಮುಖಂಡರುಗಳು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *