October 27, 2026
003

ಹಿರಿಯೂರು :

ಹಿರಿಯೂರು ತಾಲೂಕಿನಲ್ಲಿ ಆರು ಜಿ.ಪಂ.ಕ್ಷೇತ್ರಗಳಿದ್ದು. ಅದರಲ್ಲಿ ಶೇಕಡ 50 ಅಂದರೆ ಮೂರು ಕ್ಷೇತ್ರಗಳನ್ನು ಸಾಮಾನ್ಯ ಕ್ಷೇತ್ರಗಳನ್ನಾಗಿ ವಿಂಗಡಿಸಬೇಕಾಗಿತ್ತು, ಆದರೆ ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಗಳನ್ನು ಸ್ಪರ್ಧಿಸಲು ಅವಕಾಶ ಕೊಡದಂತೆ ವಂಚನೆ ಮಾಡಲಾಗಿದೆ ಎಂಬುದಾಗಿ ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಕೆ.ಜಿ.ಹನುಮಂತರಾಯ ಆರೋಪಿಸಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರ ಅದರಲ್ಲೂ ಸಾಮಾನ್ಯ ಮಹಿಳೆ ಮೀಸಲು ಮಾಡಿ ಪುರುಷರ ರಾಜಕೀಯ ಮಹತ್ವಕಾಂಕ್ಷೆಗೆ ಕಲ್ಲು ಹಾಕಲಾಗಿದೆ, ಅದರಲ್ಲೂ ವಿ.ವಿ.ಪುರ ಜಿಲ್ಲಾ ಪಂಚಾಯತ್ ಕ್ಷೇತ್ರ ಕಳೆದ ಬಾರಿಯಂತೆ ಈಬಾರಿಯೂ ಸಹ ಅನುಸೂಚಿತಜಾತಿ ಮೀಸಲಾತಿಯಾಗಿ ವರ್ಗೀಕರಿಸಲಾಗಿದೆ,

ಸಾಮಾನ್ಯರು ಸ್ಪರ್ಧಿಸಲು ಅವಕಾಶವನ್ನು ನಿರಾಕರಿಸಲಾಗಿದೆ. ಇದರ ಹಿಂದೆ ಕಾಣದ ಕೈಗಳ ಕೈವಾಡವಿದೆ. ಹಿರಿಯೂರು ವಿಧಾನಸಭಾ ಕ್ಷೇತ್ರವು ಮೂರು ದಶಕಗಳಿಗೂ ಹೆಚ್ಚು ಕಾಲ ಅನುಸೂಚಿತ ಜಾತಿ ಮೀಸಲಾತಿಗೆ ವರ್ಗೀಕರಿಸಿದ್ದು. ಈಗ ಸಾಮಾನ್ಯವಾಗಿದೆ.

ಆದರೆ ಸ್ಥಳೀಯ ಸಂಸ್ಥೆ ಚುನಾವಣೆ ಜಿಲ್ಲಾ ಪಂಚಾಯತ್ ನಲ್ಲೂ ಸಹ ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಗಳು ಸ್ಪರ್ಧಿಸದಂತೆ ನೋಡಿಕೊಳ್ಳಲು ಚುನಾವಣೆಯಿಂದ ದೂರ ಇಟ್ಟು ರಾಜಕೀಯ ಮಾಡಲು ಓಳಸಂಚು ಮಾಡಲಾಗಿದೆ. ಈ ಬಗ್ಗೆ  ನಾವು ಜಿಲ್ಲಾಧಿಕಾರಿಗಳಿಗೆ ತಕರಾರು ಸಲ್ಲಿಸಲಿದ್ದೇವೆ ಎಂಬುದಾಗಿ ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *