July 29, 2026
01

ಹಿರಿಯೂರು :

ನಗರದಲ್ಲಿ ಭಾನುವಾರ ನಡೆದ  ಮಾಜಿ ಶಾಸಕರು ಹಾಗೂ ರಾಜ್ಯದ ಮಾಜಿ ಸಚಿವರು ಆದಂತಹ ದಿ.ಡಿ.ಸುಧಾಕರ್ ನುಡಿನಮನ ಕಾರ್ಯಕ್ರಮಕ್ಕೆ ಪತ್ರಕರ್ತರು, ಸರ್ವ ಪಕ್ಷಗಳ ಮುಖಂಡರು ಸಂಘ ಸಂಸ್ಥೆಗಳನ್ನು ದೂರ ಇಟ್ಟು ಕೇವಲ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಎನ್ನುವ ರೀತಿಯಲ್ಲಿ ಮಾಡಿರುವುದು ದುರಾದೃಷ್ಟಕರ ಸಂಗತಿ ಎಂಬುದಾಗಿ ಸಾಮಾಜಿಕ ಕಾರ್ಯಕರ್ತರಾದ ಕಸವನಹಳ್ಳಿರಮೇಶ್ ಬೇಸರ ವ್ಯಕ್ತಪಡಿಸಿದ್ದಾರೆ.

ದಿವಂಗತ ಸುಧಾಕರ್ ಅವರು ಕಾಂಗ್ರೆಸ್ ಪಕ್ಷದ ಟಿಕೆಟ್ ನಿಂದ ಹಿರಿಯೂರು ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾರೆ, ಅಲ್ಲದೆ ರಾಜ್ಯದ ಸಚಿವರು ಆಗಿದ್ದಾರೆ, ಅವರನ್ನು ಕೇವಲ ಪಕ್ಷಕ್ಕೆ ಸೀಮಿತ ಮಾಡಿ ಜನರನ್ನು ದೂರ ಇಟ್ಟು, ಆಮೇಲೆ ಸರ್ಕಾರದ ಅಧಿಕಾರ ದುರುಪಯೋಗಪಡಿಸಿಕೊಂಡು ಅಂಗಡಿ ಮುಂಗಟ್ಟುಗಳನ್ನು ಆಸ್ಪತ್ರೆಗೆ ಬರುವ ಜನಸಾಮಾನ್ಯರನ್ನು ಶಾಲೆಗಳನ್ನು ಮುಚ್ಚಿಸಿ ಪ್ರತ್ಯೇಕತೆ ರೂಪಿಸಿ ಒಂದು ರೀತಿಯ ಕೋವಿಡ್ ನಲ್ಲಿಯ ಲಾಕ್ ಡೌನ್ ನೆನಪಿಸುವಂತೆ ಮಾಡಿದ್ದಾರೆ.

ನಗರಕ್ಕೆ ಪ್ರವೇಶ ಕೊಡುವ  ನಾಲ್ಕು ದಿಕ್ಕಿನಲ್ಲಿ ಪೊಲೀಸ್ ಬಂದೋಬಸ್ತ್ ಮಾಡಿ ನಗರ ಪ್ರವೇಶವನ್ನು ತಡೆದು ಬೇಕಾದವರನ್ನು ಮಾತ್ರ ಒಳಗಡೆ ಬಿಟ್ಟುಕೊಂಡು ಉಳಿದವರನ್ನು ದೂರ ಇಟ್ಟು ತಮಗೆ ತಿಳಿದ ಹಾಗೆ ಕಾರ್ಯಕ್ರಮ ನಡೆಸಿಕೊಂಡಿದ್ದಾರೆ, ನಾಳೆ ಚುನಾವಣೆ ಬಂದಾಗ ಸಹ ಇದೇ ರೀತಿ ಮಾಡುತ್ತೀರಾ,? ಆಗ ಹಳ್ಳಿಗಳಿಗೆ ಬರುವಾಗ ಇದೇ ರೀತಿ ಪೊಲೀಸ್ ಬಂದೋಬಸ್ತ್ ತೆಗೆದುಕೊಂಡು ಬರುತ್ತೀರಾ ? ಎಂಬುದಾಗಿ ಅವರು ಪ್ರಶ್ನಿಸಿದ್ದಾರೆ.

ಜನಪ್ರಿಯ ಆಗಬೇಕಾದ ಕಾರ್ಯಕ್ರಮವನ್ನು ಸೀಮಿತಗೊಳಿಸಿ ಮಾಡಿರುವುದು ಅದರಲ್ಲೂ ಹಿರಿಯೂರು ತಾಲೂಕಿನ ಮುಖಂಡರುಗಳು ಸಂಘಸಂಸ್ಥೆಗಳವರು ಕೊನೆಗೆ ಪತ್ರಕರ್ತರನ್ನು ಸೇರಿದಂತೆ ಎಲ್ಲರನ್ನು ದೂರವಿಟ್ಟು ನುಡಿನಮನ ಕಾರ್ಯಕ್ರಮ ಮಾಡಿದ್ದು ಬೇಸರದ ಸಂಗತಿಯಾಗಿದ್ದು, ಕಾರ್ಯಕ್ರಮಕ್ಕೆ ಬರುವಾಗ ರಸ್ತೆ ಅಪಘಾತವಾಗಿ 15-16 ಜನ ಆಸ್ಪತ್ರೆ ಸೇರಿದ್ದಾರೆ.

ಅದರ ಹೊಣೆಗಾರಿಕೆ ಯಾರದು.? ಭಾನುವಾರ ನಡೆದ ಎಲ್ಲಾ ಅವಘಡಗಳಿಗೆ  ಹೊಣೆಗಾರರು ಯಾರು? ಎಲ್ಲಾ ಸಂದರ್ಭಗಳಲ್ಲೂ ರಾಜಕೀಯ ಪಕ್ಷಗಳನ್ನೇ ಮುಂದುಮಾಡುವುದು ಜನಪರ ಚಿಂತನೆ ಅಲ್ಲ ಎನ್ನುವುದು ನಮ್ಮ ಅಭಿಪ್ರಾಯ ಇದಕ್ಕೆ ಸಂಬಂಧಪಟ್ಟವರು ಉತ್ತರ ಕೊಡುತ್ತಾರೆಯೇ? ಕಾದು ನೋಡಬೇಕಿದೆ ಎಂಬುದಾಗಿ ಸಾಮಾಜಿಕ ಹೋರಾಟಗಾರ ಕಸವನಹಳ್ಳಿರಮೇಶ್ ಸಂಬಂಧಪಟ್ಟವರನ್ನು ಪ್ರಶ್ನಿಸಿದ್ದಾರೆ.

About The Author

Leave a Reply

Your email address will not be published. Required fields are marked *