July 29, 2026
00002

ಹಿರಿಯೂರು :

ದೇಶದ ರಕ್ಷಣೆಗಾಗಿ ಹಗಲು-ರಾತ್ರಿ ಎನ್ನದೆ ತಮ್ಮ ಪ್ರಾಣವನ್ನು ಪಣಕ್ಕೆಟ್ಟು ದೇಶಕ್ಕಾಗಿ ಹೋರಾಡುವ ಭಾರತೀಯ ಸೈನಿಕರ ಧೈರ್ಯ, ತ್ಯಾಗ, ದೇಶಪ್ರೇಮವನ್ನು ನಾವು-ನೀವೆಲ್ಲರೂ ಸ್ಮರಿಸಬೇಕು ಎಂಬುದಾಗಿ ಬಿಜೆಪಿ ಮುಖಂಡರಾದ ಶ್ರೀ ರಾಜಣ್ಣ ಹೇಳಿದರು.

ನಗರದ ಎನ್.ಡಿ.ಎ ಜನಸಂಪರ್ಕ ಕಚೇರಿಯಲ್ಲಿ “ಕಾರ್ಗಿಲ್ ವಿಜಯ ದಿವಸದ” ಪ್ರಯುಕ್ತ  ಹುತಾತ್ಮ ಯೋಧರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ನಂತರ  ಅವರು ಮಾತನಾಡಿದರು.

1999 ರಲ್ಲಿ  ಅಧಿಕಾರದಲ್ಲಿದ್ದ ದೇಶದಹೆಮ್ಮೆಯ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಅವರು ಭಾರತದ ಗಡಿಯೊಳಗೆ  ನುಸುಳಿದ್ದ ಪಾಕ್ ಸೇನೆಯನ್ನು “ಆಪರೇಷನ್ ವಿಜಯ ಕಾರ್ಯಾಚರಣೆ”ಯ ಮೂಲಕ ಹಿಮ್ಮೆಟ್ಟಿಸಿ ಅವರು ವಶಪಡಿಸಿಕೊಂಡಿದ್ದಂತಹ ಭೂಮಿಯನ್ನು ಹಿಂಪಡೆಯಲಾಯಿತು,

ಆ ಸಂದರ್ಭದಲ್ಲಿ ನೂರಾರು ವೀರಯೋಧರ ಬಲಿದಾನವಾಯಿತು, ಜುಲೈ 26 ತಂದು ಭಾರತ ವಿಜಯ ಸಾಧಿಸಿ ಯುದ್ದ ಕೊನೆಗೊಳಿಸಿದ ದಿನ  ಆ ಕಾರಣದಿಂದ ಪ್ರತಿವರ್ಷ ಜುಲೈ 26 ನೇ ತಾರೀಖಿನಂದು ಕಾರ್ಗಿಲ್ ವಿಜಯ ದಿವಸ ಆಚರಣೆ ಮಾಡಲಾಗುತ್ತದೆ ಎಂಬುದಾಗಿ ಹೇಳಿದರು.

ಈ ಸಂದರ್ಭದಲ್ಲಿ ನಿವೃತ್ತ ಯೋಧರಾದ ಮಂಜುನಾಥ, ಪುರುಷೋತ್ತಮ್, ಬಸವರಾಜಪ್ಪ, ನಾಗರಾಜ, ಜೆ.ಬಿ.ರಾಜಣ್ಣ, ಇವರುಗಳನ್ನು ಶಾಲು ಹೊದಿಸಿ, ಸನ್ಮಾನಿಸಿ ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ  ಬಿಜೆಪಿ ಹಿರಿಯ ಮುಖಂಡರಾದ ಎಂ.ಎಸ್.ರಾಘವೇಂದ್ರ, ವಿಶ್ವನಾಥ್,  ದ್ಯಾಮಣ್ಣ,   ಹರ್ಷ,   ಎ.ರಾಘವೇಂದ್ರ,  ಯುವಮುಖಂಡರಾದ ಎನ್.ಧನಂಜಯನಂದಿಹಳ್ಳಿ, ವೇದಮೂರ್ತಿ, ಯೋಗೀಶ್, ಯಶೋಧರ,  ನಾಗೇಂದ್ರಪ್ಪ,  ಪಾರ್ಥ,  ತಿಪ್ಪೇಸ್ವಾಮಿ, ಶಶಿಕುಮಾರ್,  ಸಂತೋಷ್ ಹಾಗೂ ಅಪಾರ ಸಂಖ್ಯೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *