
ಹಿರಿಯೂರು :
ಇಂದಿನ ಯುವಜನತೆ ಮಹರ್ಷಿ ವಾಲ್ಮೀಕಿಯವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಜೊತೆಗೆ ನಮ್ಮಲ್ಲಿರುವ ಜಾತಿ, ಧರ್ಮ, ಭಾಷೆ ಮತ್ತು ವರ್ಗದ ಭೇದಭಾವಗಳನ್ನು ಮರೆತು ಎಲ್ಲರನ್ನೂ ಸಮಾನವಾಗಿ ಗೌರವಿಸುವ ಸಮಾಜವನ್ನು ನಿರ್ಮಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂಬುದಾಗಿ ನಗರಸಭೆ ಪೌರಾಯುಕ್ತರಾದ ಎ.ವಾಸಿಂ ಹೇಳಿದರು.
ನಗರದ ನಗರಸಭಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಶ್ರೀಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ನಂತರ ಅವರು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ನಗರಸಭೆ ಪೌರಾಯುಕ್ತರಾದ ಎ.ವಾಸಿಂ, ಕಚೇರಿಯ ವ್ಯವಸ್ಥಾಪಕರಾದ ನಿರಂಜನ್, ನಿರಂಜನಿ, ಸಿಎಓ ಶ್ರೀಮತಿನಾಗರತ್ನಮ್ಮ, ಆರೋಗ್ಯ ನಿರೀಕ್ಷಕರುಗಳಾದ ಸುನೀಲ್ ಕುಮಾರ್, ಅಶೋಕ್, ಮಹಾಲಿಂಗ, ರಾಜು, ಲೆಕ್ಕ ಅಧೀಕ್ಷಕರಾದ ಗೋವಿಂದರಾಜು, ಜನಾರ್ಧನ್ ಹಾಗೂ ತಾಂತ್ರಿಕ ಶಾಖೆ ಸಿಬ್ಬಂದಿಗಳಾದ ಶ್ರೀರಂಗಯ್ಯ, ಪ್ರಸನ್ನಕುಮಾರ್ ಮತ್ತು ಕಚೇರಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
