October 28, 2026
0001

ಹಿರಿಯೂರು :

ಯುವ ಕ್ರೀಡಾಪಟುಗಳ ಉತ್ಸಾಹ, ಕ್ರೀಡಾ ಮನೋಭಾವ ಹಾಗೂ ಪ್ರತಿಭೆಯನ್ನು ಕಂಡು ತುಂಬಾ ಸಂತೋಷವಾಯಿತು. ಕ್ರೀಡೆಯು ಯುವಜನರಲ್ಲಿ ಒಗ್ಗಟ್ಟು, ಶಿಸ್ತು ಹಾಗೂ ಸ್ನೇಹಭಾವವನ್ನು ಬೆಳೆಸುವ ಉತ್ತಮ ವೇದಿಕೆಯಾಗಿದೆ ಎಂಬುದಾಗಿ ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಅಭ್ಯರ್ಥಿಯಾದ ಸುಹಾಸ್ ಸುಧಾಕರ್ ಹೇಳಿದರು.

ತಾಲ್ಲೂಕಿನ ಮಸ್ಕಲ್ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಸ್ಕಲ್ ಪ್ರೀಮಿಯರ್ ಲೀಗ್ ಸೀಸನ್–4 ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿ, ಆಟಗಾರರಿಗೆ ಶುಭಹಾರೈಸಿ, ನಂತರ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಪಂದ್ಯಾವಳಿಯಲ್ಲಿ ಭಾಗವಹಿಸಿದ ಎಲ್ಲಾ ತಂಡಗಳಿಗೂ, ಆಟಗಾರರಿಗೂ ಹಾಗೂ ಕಾರ್ಯಕ್ರಮದ ಆಯೋಜಕರಿಗೂ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿ, ಶುಭಹಾರೈಸಿದರು.

About The Author

Leave a Reply

Your email address will not be published. Required fields are marked *