July 28, 2026
1+

ಹಿರಿಯೂರು :     

ನಗರದ ಪಾಂಡುರಂಗ ದೇವಸ್ಥಾನದಲ್ಲಿ ಪ್ರಥಮ ಏಕಾದಶಿಯ ಪ್ರಯುಕ್ತ ಶ್ರೀಪಾಂಡುರಂಗಸ್ವಾಮಿ ಹಾಗೂ ರುಕ್ಮಿಣಿ ದೇವಿಗೆ ವಿಶೇಷ ಹೂವಿನ ಅಲಂಕಾರವನ್ನು ಮಾಡಲಾಗಿತ್ತು, ಶ್ರೀಪಾಂಡುರಂಗಸ್ವಾಮಿ ಹಾಗೂ ರುಕ್ಮಿಣಿ ದೇವಿಯ ಪಾದಗಳನ್ನು ಸ್ಪರ್ಷಿಸಿ, ಭಗವಂತನ ಕೃಪೆಗೆ ಪಾತ್ರರಾಗಲು ಬೆಳಗಿನಿಂದಲೇ ನೂರಾರು ಭಕ್ತರು ಸರದಿಯ ಸಾಲಿನಲ್ಲಿ ನಿಂತು ಶ್ರೀಪಾಂಡುರಂಗಸ್ವಾಮಿಯ ದರ್ಶನವನ್ನು ಪಡೆದರು.

ಪ್ರಥಮ ಏಕಾದಶಿಯನ್ನು ಆಘಾಡ ಶುದ್ಧ ಏಕಾದಶಿ, ದೇವಶಯನ ಏಕಾದಶಿ  ಎಂದು ಕರೆಯುತ್ತಾರೆ, ಈ ದಿನದಿಂದ ಭಗವಾನ್ ವಿಷ್ಣುವು ನಾಲ್ಕು ತಿಂಗಳುಗಳ ಕಾಲ ಕ್ಷೀರಸಾಗರದಲ್ಲಿ ಯೋಗನಿದ್ರೆಗೆ ಜಾರುತ್ತಾನೆ ಎಂಬ ನಂಬಿಕೆ ಜನರಲ್ಲಿದ್ದು, ಹಾಗಾಗಿ ಈ ದಿನದಂದು ಪ್ರತಿಯೊಬ್ಬರೂ ಭಗವಾನ್ ವಿಷ್ಣುವಿನ ದರ್ಶನಮಾಡಬೇಕೆಂದು ಶಾಸ್ತ್ರವಿದ್ದು, ಈ ದಿನದಂದು ಭಕ್ತರು ವಿಷ್ಣುವಿನ ದರ್ಶನ ಮಾಡಲು ದೇವಸ್ಥಾನಕ್ಕೆ ಬರುತ್ತಾರೆ.

About The Author

Leave a Reply

Your email address will not be published. Required fields are marked *