July 28, 2026
000000000007

ಹಿರಿಯೂರು :

ಹಿರಿಯೂರು ನಗರಕ್ಕೆ ರಾಜ್ಯದ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರು ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ನಗರದ ನೆಹರು ಮೈದಾನವನ್ನು ಬೃಹತ್ ಪೆಂಡಾಲುಗಳೊಂದಿಗೆ ಸುಸಜ್ಜಿತವಾಗಿ ಸಜ್ಜುಗೊಳಿಸಲಾಗಿದ್ದು, ನಗರದ ಪ್ರಧಾನ ರಸ್ತೆಯುದ್ಧಕ್ಕೂ ಮುಖ್ಯಮಂತ್ರಿಗಳ ಹಾಗೂ ಪಕ್ಷದ ಮುಖಂಡರ ಹಾಗೂ ಜನಪ್ರತಿನಿಧಿಗಳ ಬೃಹತ್ ಕಟೌಟ್ ಗಳನ್ನು ನಿಲ್ಲಿಸಲಾಗಿದ್ದು, ನಗರಸಭೆಯವರು ನಗರವನ್ನು ಸ್ವಚ್ಛಗೊಳಿಸಿ, ಮುಖ್ಯಮಂತ್ರಿಗಳ ಸ್ವಾಗತಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಈ ನೆಹರು ಕ್ರೀಡಾಂಗಣದಲ್ಲಿ ಈ ಹಿಂದೆ ಎಂದೆಂದೂ ಕಂಡೂಕಾಣದಂತಹ ಬೃಹತ್ ಗಾತ್ರದ ಕಮಾನುಗಳ ಸಾವಿರಾರು ಆಸನಗಳ ಪೆಂಡಾಲು ನಿರ್ಮಿಸಲಾಗುತ್ತಿದೆ, ಈ ಪೆಂಡಾಲಿನಲ್ಲಿ ಭಾನುವಾರದಂದು ಕ್ಷೇತ್ರದ ದಿವಂಗತ ಮಾಜಿ ಸಚಿವರಾದ ಡಿ.ಸುಧಾಕರ್ ನುಡಿನಮನ ಕಾರ್ಯಕ್ರಮ ನಡೆಯಲಿದ್ದು, ಇದೇ ಸಂದರ್ಭದಲ್ಲಿ ಹಿರಿಯೂರು ಕ್ಷೇತ್ರದ ಉಪಚುನಾವಣೆ ಅಭ್ಯರ್ಥಿ  ಸಹ ಘೋಷಣೆಯಾಗುವ ಸಂಭವವಿದೆ ಎನ್ನಲಾಗಿದೆ.

ಕ್ರೀಡಾಂಗಣದ ಮಧ್ಯಭಾಗದಲ್ಲಿ ಬೃಹತ್ ಕಮಾನುಗಳ ವೇದಿಕೆ ನಿರ್ಮಾಣಗೊಂಡಿದ್ದು, ಬಯಲು ರಂಗಮಂದಿರದ ಮುಂಭಾಗದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲು ಬೃಹತ್ ಗಾತ್ರದ ವೇದಿಕೆಯನ್ನು ನಿರ್ಮಿಸಲಾಗಿದ್ದು, ಅಲ್ಲದೆ ಬೃಹತ್ ಕಮಾನು ವೇದಿಕೆಯ ಎಡ-ಬಲಗಳಲ್ಲಿ ಸಹ 2ಕಡೆ ಕಮಾನುಗಳ  ಪೆಂಡಾಲ್ ಗಳನ್ನು ನಿರ್ಮಿಸಲಾಗಿದ್ದು, ಇಲ್ಲಿ ನಾಳೆ ತಾಲ್ಲೂಕಿನ ವಿವಿಧ ಭಾಗಗಳಿಂದ ಆಗಮಿಸಿರುವ ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಸಾವಿರಾರು ಜನರಿಗೆ ಆಸನದ ವ್ಯವಸ್ಥೆಯನ್ನು ಮಾಡಲಾಗಿದೆ.

ಈ ಬೃಹತ್ ಗಾತ್ರದ ಕಮಾನುಗಳ ವೇದಿಕೆಯನ್ನು ಕೇವಲ 2 ನೇ ದಿನದಲ್ಲಿ ನಿರ್ಮಾಣಗೊಳಿಸಲಾಗಿದ್ದು, ಕ್ರೀಡಾಂಗಣದ ತುಂಬಾ ಎಲ್ಲೆಲ್ಲೂ ಕಾಮಾನುಗಳು ಹಾಗೂ ಕುರ್ಚಿಗಳು ರಾರಾಜಿಸುತ್ತಿದ್ದು, ನಾಳೆ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರು ಆಗಮಿಸುವ ಹಿನ್ನೆಲೆಯಲ್ಲಿ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮಾಡಲಾಗಿದ್ದು, ಹತ್ತಿರದಲ್ಲೇ ಇರುವ ತೇರುಮಲ್ಲೇಶ್ವರ ದೇವಸ್ಥಾನದ ಬಳಿ ನಾಳೆ ಕಾರ್ಯಕ್ರಮಕ್ಕೆ ಆಗಮಿಸಲಿರುವ ಸಾವಿರಾರು ಜನರಿಗೆ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಈ ಎಲ್ಲಾ ವ್ಯವಸ್ಥೆಗಳ ಉಸ್ತುವಾರಿಯನ್ನು ಹಾಗೂ ಕಾರ್ಯಕ್ರಮದ ಪೂರ್ವಸಿದ್ಧತೆಯನ್ನು ಪರಿಶೀಲಿಸಲು ಸ್ಥಳಕ್ಕೆ ಚಳ್ಳಕೆರೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಹಾಗೂ ಆದಿಜಾಂಬವ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಕಾಂಗ್ರೆಸ್ ಅಧ್ಯಕ್ಷರುಗಳಾದ ಖಾದಿರಮೇಶ್, ಈರಲಿಂಗೇಗೌಡ,  ಕಾಂಗ್ರೆಸ್ ಮುಖಂಡರುಗಳಾದ ಅಮೃತೇಶ್ವರ ಸ್ವಾಮಿ, ಅಶೋಕ್ ಗಿಡ್ಡೋಬೇನಹಳ್ಳಿ, ಅಡ್ವಕೇಟ್ ಲೋಕೇಶ್, ಜಿ.ಪಂ.ಮಾಜಿ ಸದಸ್ಯ ಚಂದ್ರಣ್ಣ, ನಗರಸಭೆ ಮಾಜಿ ಅಧ್ಯಕ್ಷ ಈ.ಮಂಜುನಾಥ್, ಎಸ್.ಸಿ. ಎಸ್.ಟಿ ವಿಭಾಗದ ಅಧ್ಯಕ್ಷ ಜಿ.ಎಲ್.ಮೂರ್ತಿ ಸೇರಿದಂತೆ ಹಾಗೂ ಅನೇಕ ಗಣ್ಯರು ನೆಹರು ಮೈದಾನಕ್ಕೆ ಆಗಮಿಸಿ, ಮುಖ್ಯಮಂತ್ರಿಗಳ ಕಾರ್ಯಕ್ರಮದ ಪೂರ್ವಸಿದ್ಧತೆಗಳ ಪರಿಶೀಲನೆಯನ್ನು ನಡೆಸಿದರು.

About The Author

Leave a Reply

Your email address will not be published. Required fields are marked *