May 31, 2026
0003

ಚಿತ್ರದುರ್ಗ:

ಬೇಸಿಗೆ ರಜೆಯ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ಮಕ್ಕಳು ಮತ್ತು ಯುವಕರು ಕೃಷಿಹೊಂಡಗಳು, ಕ್ರಷರ್ ಕ್ವಾರಿಗಳು, ಬಾವಿ ಹಾಗೂ ಕೆರೆ-ಕಟ್ಟೆಗಳಲ್ಲಿ ಈಜಲು ಹೋಗಿ ಅಕಾಲಿಕ ಮರಣಕ್ಕೀಡಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಆಡಳಿತಗಳು ತಕ್ಷಣ ಎಚ್ಚೆತ್ತುಕೊಂಡು ಸೂಕ್ತಕ್ರಮಕೈಗೊಳ್ಳಬೇಕೆಂದು ಕೆ.ಆರ್.ಎಸ್ ಚಿತ್ರದುರ್ಗ ತಾಲ್ಲೂಕು ಅಧ್ಯಕ್ಷ ಮುಸ್ತಾಕ್ ಅಹಮದ್ ಒತ್ತಾಯಿಸಿದರು.

ಜಿಲ್ಲಾಧಿಕಾರಿಗಳ ಅನುಪಸ್ಥಿತಿ ಯಲ್ಲಿ ಅವರ ಪರವಾಗಿ ಉಪವಿಭಾಗ ಅಧಿಕಾರಿಗಳಿಗೆ ಸಾರ್ವಜನಿಕರ ಹಿತಾಸಕ್ತಿಗಾಗಿ ಮತ್ತು ಮೃತಪಟ್ಟಿರುವ ದುರ್ದೈವಿಗಳ ಕುಟುಂಬಕ್ಕೆ ಪರಿಹಾರ ಒದಗಿಸಿಕೊಡಲು ಒತ್ತಾಯಿಸಿ, ಕೆ ಆರ್ ಎಸ್ ಪಕ್ಷದ ವತಿಯಿಂದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಮಹೇಶ್ ಸಿ ನಗರಂಗೆರೆ ಇವರ ಮಾರ್ಗದರ್ಶನದಲ್ಲಿ ಜಿಲ್ಲಾಧಿಕಾರಿಗಳ ಅನುಪಸ್ಥಿತಿ ಯಲ್ಲಿ ಅವರ ಪರವಾಗಿ ಉಪವಿಭಾಗ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಅವರು ಮಾತನಾಡಿದರು.

ಜಿಲ್ಲೆಯ ಎಲ್ಲಾ ಅಪಾಯಕಾರಿ ಮತ್ತು ಸೂಕ್ಷ್ಮ ಜಲಮೂಲಗಳನ್ನು ಗುರುತಿಸಿ, ಅವುಗಳ ಸುತ್ತಲೂ ತಕ್ಷಣವೇ ತಂತಿ ಬೇಲಿ ನಿರ್ಮಿಸಬೇಕು. ಇಂತಹ ಸ್ಥಳಗಳಲ್ಲಿ ಅಪಾಯದ ಮುನ್ಸೂಚನೆ ನೀಡುವ ನಾಮಫಲಕಗಳನ್ನು ಅಳವಡಿಸಬೇಕು. ಕ್ವಾರಿ ಹಾಗೂ ಅಪಾಯಕಾರಿ ಹೊಂಡಗಳ ಬಳಿ ಪೊಲೀಸ್ ಗಸ್ತು ಹೆಚ್ಚಿಸಬೇಕು ಮತ್ತು ಕಾವಲುಗಾರರನ್ನು ನೇಮಿಸಬೇಕು.

ಈ ಬಗ್ಗೆ ಜಿಲ್ಲಾ ಮತ್ತು ತಾಲ್ಲೂಕು ಆಡಳಿತಗಳಿಂದ ಸಾರ್ವಜನಿಕ ಪತ್ರಿಕೆ,ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಅಪಾಯಕಾರಿ ನೀರಿರುವ ಸ್ಥಳಗಳಿಗೆ ಹೋಗದ ಹಾಗೆ ಮಕ್ಕಳು ಯುವಕರು ಸಾರ್ವಜನಿಕರು ಸುರಕ್ಷಿತವಾಗಿ ಇರಲು ಪ್ರಕಟಣೆ  ಹೊರಡಿಸುವ ಮೂಲಕ ಜನಜಾಗೃತಿ ಗೊಳಿಸುವುದು ಈಗಾಗಲೇ ಮೃತಪಟ್ಟಿರುವ ದುರ್ದೈವಿಗಳ ಕುಟುಂಬಕ್ಕೆ ಜಿಲ್ಲಾಡಳಿತದಿದ ಆಗಿರುವ ನಿರ್ಲಕ್ಷಕ್ಕೆ ಸೂಕ್ತ ಪರಿಹಾರ ಧನ ವಿತರಿಸಬೇಕು ಎಂಬುದಾಗಿ ಒತ್ತಾಯಿಸಿದರು.

ಇಂತಹ ಅನಾಹುತಗಳನ್ನು ತಡೆಗಟ್ಟಿ, ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದೆ ಇರಲಿ ಮತ್ತು ನೊಂದ ಕುಟುಂಬಗಳಿಗೆ ಪರಿಹಾರ ಒದಗಿಸಿಕೊಡಬೇಕು ಎಂಬುದಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಚಿತ್ರದುರ್ಗ ತಾಲ್ಲೂಕು ಘಟಕದ ವತಿಯಿಂದ  ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಕೆ ಆರ್ ಎಸ್ ಪಕ್ಷದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ತೌಸೀಫ್ ರಹಮಾನ್,  ಹಾಗೂ ಸದಸ್ಯರಾದ ಆಲಿ, ಜಾಫರ್ ಸಾದಿಕ್, ಅಬುಜರ್, ಆಫ್ರಿದ್ದಿ, ರಹಮತಿ, ಆದಿಲ್, ನಯಾಜ್ ಅಹಮದ್, ಜಭಿ, ಮತ್ತು ಜಬಿವುಲ್ಲಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *