May 31, 2026
000000001

ಹಿರಿಯೂರು :     

ಫ್ರೋಫೆಷನಲ್ ಕೋರಿಯರ್ ನಿಂದ ಮೇ 14 ರಿಂದ ರಾಜ್ಯದ ಪ್ರಮುಖ ಆಯ್ದ ಸ್ಥಳಗಳಿಗೆ ಫ್ರೋ.ಎಕ್ಸ್ ಸೇವೆ ಆರಂಭಿಸಲಾಗಿದೆ ಎಂಬುದಾಗಿ ಫ್ರೋಫೇಷನಲ್ ಕೋರಿಯರ್ ನ ವಲಯ ವ್ಯವಸ್ಥಾಪಕರಾದ ಎಂ.ಯು.ಶಿವರಾಂ ಹೇಳಿದರು.

ನಗರದ ಪ್ರಧಾನ ರಸ್ತೆಯಲ್ಲಿರುವ ಕಚೇರಿಯಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಸುದ್ಧಿಗೋಷ್ಠಿಯನ್ನು  ಉದ್ದೇಶಿಸಿ, ಅವರು ಮಾತನಾಡಿದರು.

ಗ್ರಾಹಕರ ಡಾಕ್ಯುಮೆಂಟ್ ಅಥವಾ ಪಾರ್ಸೆಲ್ ಗಳನ್ನು ಬುಕ್ ಮಾಡಿದ ಮರುದಿನ ಬೆಳಿಗ್ಗೆ ಗ್ರಾಹಕರು ತಿಳಿಸಿದ ವಿಳಾಸಕ್ಕೆ ಶೇ.100 ರಷ್ಟು ಖಚಿತವಾಗಿ ತಲುಪಿಸುತ್ತೇವೆ. ನಮ್ಮ ವೆಬ್ ಸೈಟ್ ನಲ್ಲಿ ಗ್ರಾಹಕರಿಗೆ ಎಲ್ಲಾ ವಿವರಗಳು ಲಭ್ಯವಿರುತ್ತವೆ ಎಂಬುದಾಗಿ ಅವರು ತಿಳಿಸಿದರು.

ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಗ್ರಾಹಕರು ಬುಕ್ಕಿಂಗ್ ಮಾಡಿದ ವಸ್ತುಗಳನ್ನು ತಲುಪಿಸಲು ನಾವು ವಿಫಲವಾದರೆ ಬುಕ್ಕಿಂಗ್ ಮಾಡಿದ ಎರಡರಷ್ಟು ಹಣವನ್ನು ಗ್ರಾಹಕರಿಗೆ ಹಿಂದಿರುಗಿಸುತ್ತೇವೆ, ಹಾಗಾಗಿ ಗ್ರಾಹಕರು ಬೆಲೆ ಬಾಳುವ ಯಾವುದೇ ವಸ್ತುಗಳನ್ನು ಕೊಡುಗೆಗಳನ್ನು “ಫ್ರೋ-ಎಕ್ಸ್” ನೊಂದಿಗೆ ಕಳುಹಿಸಬಹುದು.

ನಮ್ಮ ಟಿಪಿಸಿ ಗೋ ಆ್ಯಪ್ ನಲ್ಲಿ ಆನ್ ಲೈನ್ ಬುಕ್ಕಿಂಗ್ ಗ್ರಾಹಕರಿಗೆ ನೇರವಾಗಿ ಲಭ್ಯವಿದೆ. ಹೆಚ್ಚಿನ ವಿವರಗಳಿಗೆ 9845352653ಗೆ ಸಂಪರ್ಕಿಸುವಂತೆ ಫ್ರೋಫೇಷನಲ್ ಕೋರಿಯರ್ ನ ವಲಯ ವ್ಯವಸ್ಥಾಪಕರಾದ ಎಂ.ಯು.ಶಿವರಾಂ ಮನವಿ ಮಾಡಿದ್ದಾರೆ.

About The Author

Leave a Reply

Your email address will not be published. Required fields are marked *