April 16, 2026
1-

ಹಿರಿಯೂರು :

ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬುಜಗಜೀವನ್ ರಾಮ್ ಅವರು ಶೋಷಿತರ ಬದುಕಿಗಾಗಿ ಇಡೀ ಜೀವನವನ್ನೇ ಮುಡುಪಿಟ್ಟು ದುಡಿದವರು, ಚಿಂತನೆ ಬದ್ಧತೆ ಹಾಗೂ ಅವರ ತತ್ವ ಆದರ್ಶಗಳನ್ನು ಇಂದಿನ ಯುವಜನತೆ ಅಳವಡಿಕೊಳ್ಳಬೇಕು, ಇವರ ಬದುಕು ತ್ಯಾಗ ದೇಶದ ನಮಗೆಲ್ಲ ಆದರ್ಶವಾಗಬೇಕಿದೆ ಎಂಬುದಾಗಿ ತಾಲೂಕು ದಂಡಾಧಿಕಾರಿಗಳು ಹಾಗೂ ತಹಶೀಲ್ದಾರರಾದ ಎಂ.ಸಿದ್ದೇಶ್ ಹೇಳಿದರು.

ನಗರದ ನೆಹರು ಮೈದಾನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ ಹಾಗೂ ಪೊಲೀಸ್ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಾರತದ ಮಾಜಿ ಉಪಪ್ರಧಾನಿ ಹಸಿರುಕ್ರಾಂತಿ ಹರಿಕಾರ ಡಾ.ಬಾಬುಜಗಜೀವನರಾಮ್ ಅವರ 119ನೇ ಜನ್ಮ ದಿನಾಚರಣೆ ಹಾಗೂ ಸಂವಿಧಾನ ಶಿಲ್ಪಿ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 135 ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಪ್ರತಿಯೊಬ್ಬರಿಗೂ ಸ್ವಾತಂತ್ರ, ಸಮಾನತೆ, ಸಾಮಾಜಿಕನ್ಯಾಯ, ರಾಜಕೀಯ ಬದುಕನ್ನು ಕಟ್ಟಿಕೊಟ್ಟಿರುವ ಅಂಬೇಡ್ಕರ್ ಅವರು ಅದಕ್ಕೆ ತಕ್ಕಂತೆ ಕಾನೂನಿನ ಎಲ್ಲಾ ಸಲಹೆಯನ್ನು ನೀಡಿದವರು ಡಾ.ಬಾಬುಜಗಜೀವನ್ ರಾಮ್ ರವರು, ಇವರಿಬ್ಬರ ಬದುಕು ನಮಗೆ ದಾರಿದೀಪವಾಗಬೇಕು ಎಂಬುದಾಗಿ ಹೇಳಿದರು.

ವಾಣಿಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ.ಡಿ.ಧರಣೇಂದ್ರಯ್ಯ ಮಾತನಾಡಿ, ಡಾ.ಬಾಬುಜಗಜೀವನ್ ರಾಮ್ ಅವರು ಕಡುಬಡತನದಲ್ಲಿ ಹುಟ್ಟಿ ಅಸ್ಪೃಶ್ಯತೆಯ ಅಸಮಾನತೆ ಅನುಭವಿಸಿ, ಶಿಕ್ಷಣವನ್ನು ಕಲಿತು ರಾಜಕೀಯ ರಂಗದಲ್ಲಿ ಸುಮಾರು 50 ವರ್ಷಗಳ ಕಾಲ ಸಂಸದರಾಗಿ, ಕಾರ್ಮಿಕ, ರೈಲ್ವೆ, ರಕ್ಷಣೆ, ಪರಿಸರ, ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ದುಡಿದು ಕಾರ್ಮಿಕರ ಬದುಕಿಗೆ ಚೈತನ್ಯ ಶಕ್ತಿಯಾಗಿದ್ದರು,

ಬರಗಾಲದಲ್ಲೂ ದೇಶದ ಜನರಿಗೆ ಆಹಾರವನ್ನು ಒದಗಿಸಿ ಹಸಿರುಕ್ರಾಂತಿಯ ಹರಿಕಾರರಾಗಿ ಬಾಂಗ್ಲಾದೇಶದ ನಿರ್ಮಾತ್ರರಾಗಿ ದುಡಿದು ದೇಶದ ಪ್ರಬುದ್ಧ ನಾಯಕರಾಗಿದ್ದಾರೆ, ಹಾಗೆ ದೇಶದ ಉಪ ಪ್ರಧಾನಿಯಾಗಿ ಮಾಡಿದಂತಹ ಸೇವೆ ಅನನ್ಯ ಇವರ ಸೇವೆಯನ್ನು ಗುರುತಿಸಿ ಭಾರತ ಸರ್ಕಾರ ಇವರಿಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂಬುದಾಗಿ ಒತ್ತಾಯಿಸಿದರು.

ಕವಿ ಹಾಗೂ ಶಿಕ್ಷಕ ಆರ್.ಶಿವಶಂಕರ್ ಸೀಗೆಹಟ್ಟಿ ಮಾತನಾಡಿ, ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಇಡೀ ದೇಶದ ಜನರ ಬದುಕಿಗಾಗಿ ಜೀವನವನ್ನು ತ್ಯಾಗ ಮಾಡಿದವರು, ಇವರನ್ನು ಒಂದು ಜಾತಿ, ಒಂದು ಧರ್ಮಕ್ಕೆ ಮೀಸಲಿಡುವುದು ಅವರ ವ್ಯಕ್ತಿತ್ವಕ್ಕೆ ಶೋಭಿತರುವುದಿಲ್ಲ ಅಂಬೇಡ್ಕರ್ ಅವರನ್ನು ಈ ದೇಶದ ನಾಯಕರಾಗಿ ವಿಶ್ವಜ್ಞಾನಿಯಾಗಿ ನೋಡುವುದು ಸಮಾಜದ ಒಳಿತಿಗೆ ಒಳ್ಳೆಯದು,

ಸ್ವಾತಂತ್ರ ಬಂದು 75 ವರ್ಷಗಳು ಕಳೆದರೂ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಅಸಮಾನತೆ ಅಸ್ಪೃಶ್ಯತೆ ಇರುವುದು ವಿಷಾದನೀಯವಾಗಿದೆ, ಇದರ ವಿರುದ್ಧ ಯುವಸಮುದಾಯ ಹೋರಾಟ ಮಾಡಬೇಕು, ಪ್ರಜ್ಞಾವಂತ ಮನಸ್ಸುಗಳು ಬದಲಾವಣೆಯ ಸಮಾಜವನ್ನು ನಿರ್ಮಿಸಲು ಪ್ರೋತ್ಸಾಹ ನೀಡಬೇಕು,

ಈ ನಿಟ್ಟಿನಲ್ಲಿ ಅಂಬೇಡ್ಕರ್ ಅವರ ಚಿಂತನೆಗಳು ಬೆಳಕಿಗೆ ಬರಬೇಕು ಆಗ ಸಮಾನತೆಯ ಸಮಾಜವನ್ನು ಕಟ್ಟಲು ಸಾಧ್ಯವಿದೆ, ಅಂಬೇಡ್ಕರ್ ಅವರು ಅರ್ಥಶಾಸ್ತ್ರಜ್ಞರಾಗಿ, ಸಮಾಜಶಾಸ್ತ್ರಜ್ಞರಾಗಿ, ನೀರಾವರಿ ಹೋರಾಟಗಾರರಾಗಿ, ಆರ್ಥಿಕ ಚಿಂತಕರಾಗಿ, ಹಲವಾರು ನೀರಾವರಿ ಯೋಜನೆಗಳನ್ನು ತರಲು ಪ್ರೇರಕ ಶಕ್ತಿಯಾಗಿ ದುಡಿದಿದ್ದಾರೆ, ಹಾಗೆ ಇವರು ಬರೆದಿರುವ ರೂಪಾಯಿ ಸಮಸ್ಯೆ ಪ್ರಬಂಧ ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ನಾಂದಿಯಾಯಿತು ಎಂಬುದಾಗಿ ಹೇಳಿದರು.

ಈ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ.ಜಿ.ಕೆ.ಪ್ರಮೋದ್, ಪೋಲೀಸ್ ಉಪಅಧೀಕ್ಷಕರಾದ ಶಿವಕುಮಾರ್, ನಗರಸಭೆಪೌರಾಯುಕ್ತಾರಾದ ಎ.ವಾಸಿಂ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ.ತಿಪ್ಪೇಸ್ವಾಮಿ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಜೆ.ದಿನೇಶ್, ಸರ್ಕಲ್ ಇನ್ಸ್ ಪೆಕ್ಟರ್ ಆನಂದಪ್ಪ, ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ರಾಘವೇಂದ್ರ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಆರ್.ರಮೇಶ್, ನಗರಸಭೆ ಮಾಜಿ ಸದಸ್ಯರಾದ ಎಂ.ಡಿ.ಸಣ್ಣಪ್ಪ, ದಲಿತ ಯುವಮುಖಂಡರಾದ ಬೋರನಕುಂಟೆ ಜೀವೇಶ್, ಹರ್ತಿಕೋಟೆ ದಯಾನಂದ್, ಪಂಚಾಯಿತಿ ಮಾಜಿ ಸದಸ್ಯರಾದ ಕೆ.ಓಂಕಾರಪ್ಪ, ಎಸ್.ಜಿ.ರಂಗಸ್ವಾಮಿ ಸಕ್ಕರ, ಜ್ಞಾನೇಶ್, ಮರಡಿಹಳ್ಳಿ ತಿಪ್ಪೇಸ್ವಾಮಿ, ಆಲೂರುಕಾಂತರಾಜ್, ತಾಲೂಕು ವಾಲ್ಮೀಕಿ ಸಂಘದ ಅಧ್ಯಕ್ಷರಾದ ಜೋಗಪ್ಪ, ಮಸ್ಕಲ್ ಲೋಕೇಶ್ ಮಾಳಿಗೆ, ರಾಜು, ಕರ್ಣಕುಮಾರ್, ಪಿಟ್ಲಾಲಿ ತಿಪ್ಪೇಸ್ವಾಮಿ, ಗಾಂಧಿನಗರ ಮಹಾಂತೇಶ್, ಅಡವಪ್ಪ, ಶ್ರವಣಗೆರೆ ಶಿವಣ್ಣ, ಕೂನಿಕೆರೆ ಮಾರುತೇಶ್, ನಂದಕುಮಾರ್, ಶಿಡ್ಲಯ್ಯನಕೋಟೆ ಕದುರಪ್ಪ ಹಾಗೂ ಇತರರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *