
ಹಿರಿಯೂರು:
ತಾಯಿ ಪರಿಶಿಷ್ಟ ಜಾತಿಗೆ ಸೇರಿದ್ದರೆ, ತಂದೆ ಪರಿಶಿಷ್ಟ ಜಾತಿಗೆ ಸೇರಿರದಿದ್ದರೂ ಮಕ್ಕಳಿಗೆ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ನೀಡಬಹುದು ಎಂಬ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ನಿಜಕ್ಕೂ ಸ್ವಾಗತಾರ್ಹ ಎಂಬುದಾಗಿ ಕರ್ನಾಟಕ ರಾಜ್ಯ ದೊಂಬರ ಸಂಘದ ಉಪಾಧ್ಯಕ್ಷರಾದ ಡಿ.ಸಿ.ಪಾಣಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಕ್ಕಳ ಜಾತಿ ವಿಚಾರದಲ್ಲಿ ತಂದೆಯ ಜಾತಿ ಮಾತ್ರ ಪರಿಗಣಿಸುತ್ತಿದ್ದ ಕಂದಾಯ ಇಲಾಖೆಯ ನೀತಿ ಸ್ತ್ರೀ ಶೋಷಣೆಯ ಮತ್ತೊಂದು ಮುಖ ಎಂದಿರುವ ಅವರು, ಅಂತರ್ಜಾತಿಯ ವಿವಾಹ ಮಾಡಿಕೊಂಡಿರುವ ಪರಿಶಿಷ್ಟ ಜಾತಿಯ ಮಹಿಳೆಯರು ಈ ವಿಶೇಷ ಅವಕಾಶ ಬಳಸಿಕೊಂಡು ತಮ್ಮ ಮಕ್ಕಳಿಗೆ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರವನ್ನು ಪಡೆಯಬೇಕೆಂದು ಸಲಹೆ ನೀಡಿದ್ದಾರೆ.
