
ಹಿರಿಯೂರು:
ದಾಂಪತ್ಯ ಜೀವನಕ್ಕೆ ಕಾಲಿಟ್ಟು 34 ವರ್ಷ ವಸಂತಗಳನ್ನು ಪೂರೈಸಿರುವ, ಕರ್ನಾಟಕದ ಪ್ರಗತಿಪರ ಪತ್ರಕರ್ತರ ಸಾಲಿನಲ್ಲಿ ಅಗ್ರಗಣ್ಯರಾದ ಕೋಟೆನಾಡಿನ ಆದರ್ಶದಂಪತಿಗಳಾದ ಚಿಕ್ಕಪ್ಪನಹಳ್ಳಿಷಣ್ಮುಖ ಹಾಗೂ ಅವರ ಧರ್ಮಪತ್ನಿಗೆ “ಹಿರಿಯೂರು ನ್ಯೂಸ್” ತಂಡದವತಿಯಿಂದ ವಿವಾಹವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳನ್ನು ಕೋರಲಾಗಿದೆ.
ಜಿಲ್ಲಾ ನೀರಾವರಿ ಹೋರಾಟಗಾರರು, ಪತ್ರಕರ್ತರು ಆದ ಶ್ರೀಯುತ ಷಣ್ಮುಖರವರ ಆಲೋಚನೆ, ಚಿಂತನೆಗಳು ಪ್ರಗತಿಪರವಾಗಿದ್ದು, ಸಮಾಜದ ಎಲ್ಲ ವರ್ಗಗಳ ಜನರ ಪರವಾಗಿವೆ, ಇವರ ಅದೆಷ್ಟೋ ಬರಹಗಳು, ವರದಿಗಳು ಸರ್ಕಾರದ ಕಣ್ಣು ತೆರೆಸಿವೆ. ಕನ್ನಡ ಪತ್ರಿಕೋದ್ಯಮದಲ್ಲಿ ಹಲವಾರು ಯುವಕರನ್ನು ಪರಿಚಯಿಸಿ, ಒಳ್ಳೆಯ ಪತ್ರಕರ್ತರನ್ನಾಗಿ ಬೆಳೆಸಿ, ರೂಪಿಸಿದ ಕೀರ್ತಿ ಇವರದ್ದು, ಪ್ರಸ್ತುತ ಸಾಮಾಜಿಕ ವ್ಯವಸ್ಥೆಯಲ್ಲಿ ಇವರಂತಹ ನಿಷ್ಕಲ್ಮಷ ವ್ಯಕ್ತಿಗಳು ಇರುವುದು ಬಹಳ ಅಪರೂಪ.
ನಮ್ಮ ಕೋಟೆನಾಡಿನ ಆದರ್ಶ ದಂಪತಿಗಳಾಗಿರುವ ಚಿಕ್ಕಪ್ಪನಹಳ್ಳಿ ಷಣ್ಮುಖ ಹಾಗೂ ಅವರ ಧರ್ಮಪತ್ನಿ ಅವರಿಗೆ ಆ ಭಗವಂತನು ಆರೋಗ್ಯ, ಆಯಸ್ಸು, ಯಶಸ್ಸಿನ ಜೊತೆಗೆ ಇವರ ದಾಂಪತ್ಯ ಜೀವನದಲ್ಲಿ ಸುಖ-ಶಾಂತಿ ನೆಮ್ಮದಿಯನ್ನು ಕೊಟ್ಟು ಕಾಪಾಡಲಿ ಎಂಬುದಾಗಿ “ಹಿರಿಯೂರುನ್ಯೂಸ್” ತಂಡದ ಮುಖ್ಯಸ್ಥರು ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಆಲೂರುಹನುಮಂತರಾಯಪ್ಪರವರು ಹಾಗೂ ಹಿರಿಯ ಪತ್ರಕರ್ತರುಗಳಾದ ಪಿ.ಆರ್.ಸತೀಶ್ ಬಾಬು, ಗೋಸಿಕೆರೆರಂಗನಾಥ್, ಕೇಶವಮೂರ್ತಿ, ಶ್ರೀಪಾದ್ ವಸಿಷ್ಠ, ಶಿವರಾಜ್ ನಾಯಕ್, ಉಮೇಶ್ ಯಾದವ್, ಪರಮೇಶ್ವರಪ್ಪ, ಇರ್ಫಾನ್ ವುಲ್ಲಾ, ಹಿದಾಯತ್ ವುಲ್ಲಾ, ಇವರುಗಳು ಶುಭಹಾರೈಸಿದ್ದಾರೆ.
