
ಹಿರಿಯೂರು :
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರವರಿಗೆ ಶ್ರೀತೇರುಮಲ್ಲೇಶ್ವರ ಸ್ವಾಮಿ ಆಯುರಾರೋಗ್ಯ ನೀಡಿ, ಪಕ್ಷವನ್ನು ಬಲಪಡಿಸಿ, ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ತರುವ ಶಕ್ತಿಯನ್ನು ನೀಡಿ ರೈತರ, ಬಡವರ, ದೀನದಲಿತರ, ಮಹಿಳೆಯರ, ಸೇವೆ ಮಾಡುವ ಅವಕಾಶ ಕಲ್ಪಿಸಲಿ ಎಂಬುದಾಗಿ ಜಿಲ್ಲಾ ಮಾಜಿ ಅಧ್ಯಕ್ಷರಾದ ಡಿ.ಯಶೋಧರರವರು ಸೇರಿದಂತೆ ಪಕ್ಷದ ಮುಖಂಡರು ಶ್ರೀತೇರುಮಲ್ಲೇಶ್ವರ ಸ್ವಾಮಿಗೆ ಪ್ರಾರ್ಥಿಸಿದರು.

ತಾಲ್ಲೂಕು ಜ್ಯಾತ್ಯಾತೀತ ಜನತಾದಳ ಪಕ್ಷದ ವತಿಯಿಂದ ಮಾಜಿ ಪ್ರಧಾನ ಮಂತ್ರಿಗಳು, ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಆದ ಶ್ರೀಮಾನ್ ಹೆಚ್.ಡಿ.ದೇವೇಗೌಡರವರ ಹುಟ್ಟುಹಬ್ಬದ ಅಂಗವಾಗಿ ನಗರದ ಶ್ರೀತೇರುಮಲ್ಲೇಶ್ವರ ಸ್ವಾಮಿಗೆ ವಿಶೇಷಪೂಜೆ ಸಲ್ಲಿಸಿ, ನಗರದ ಸರ್ಕಾರಿ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಣ್ಣು, ಬ್ರೆಡ್ ವಿತರಿಸುವ ಮೂಲಕ ಆಚರಿಸಿ, ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ತಾಲ್ಲೂಕು ಅಧ್ಯಕ್ಷರಾದ ಕೆ.ಶಂಕರಮೂರ್ತಿ, ಜಿಲ್ಲಾ ಮಾಜಿ ಅಧ್ಯಕ್ಷರಾದ ಡಿ.ಯಶೋಧರ, ಎಂ.ಜಯಣ್ಣ, ಮುಖಂಡರಾದ ಶಿವಪ್ರಸಾದ್ ಗೌಡ, ಡಾ.ಜಗನ್ನಾಥ್, ಶಿವಪ್ಪನಾಯಕ, ಚಿಲ್ಲಹಳ್ಳಿಶಿವಣ್ಣ, ಚಿದಾನಂದ. ಕೆ,ಎಂ.ಡಿ.ರಮೇಶ್ ಕುಮಾರ್, ಶ್ರವಣಗೆರೆ ಹನುಮಂತರಾಯ, ಚಂದ್ರು(ಎಪಿ), ನಗರದ ನಾಗರಾಜ್, ಓಬಳೇಶ್, ಅಕ್ಷಯ್ ಕುಮಾರ್, ದಿಲೀಪ್, ಬೀರೇನಹಳ್ಳಿ ನಿರಂಜನಮೂರ್ತಿ, ಪುಟ್ಟಸ್ವಾಮಿ, ವಿ.ವಿಜಯಕುಮಾರ್, ಮಾಜಿ ತಾ.ಪಂ. ಸದಸ್ಯರಾದ ಹನುಮಂತರಾಯ, ಕರಿಯಪ್ಪ, ಶ್ರವಣಗೆರೆಶಿವಣ್ಣ, ರಾಮಕೃಷ್ಣ, ಮಾಜಿ ಗ್ರಾ.ಪಂ. ಅಧ್ಯಕ್ಷರಾದ ಲೋಕೇಶ್, ವಿ.ವಿ.ಪುರ ಶ್ರೀನಿವಾಸ್, ಉಪ್ಪಾರಹಳ್ಳಿ ರಂಗಸ್ವಾಮಿ(ಟಿ.ಎಸ್), ರಾಮಣ್ಣ, ಅಂಬಲಗೆರೆ ವಿ.ಮಂಜುನಾಥ್, ವಿರೇಂದ್ರ, ರಂಗೇನಹಳ್ಳಿಡಿ.ನಾಗರಾಜ್, ರಾಘವೇಂದ್ರ, ತಿಪ್ಪೇಸ್ವಾಮಿ, ಪಿಲಾಜನಹಳ್ಳಿ ಕಾಂತರಾಜು, ನರಸಿಂಹಣ್ಣ, ರವಿಕುಮಾರ್, ಮದ್ದಣ್ಣ, ಕುಮಾರ್ ಹಾಗು ಅನೇಕ ಮುಖಂಡರು ಪಾಲ್ಗೊಂಡಿದ್ದರು.
