
ಹಿರಿಯೂರು :
ದಿಂಡಾವರದ ನಾಗರೀಕರು ಚಿಕ್ಕಮಂಗಳೂರು ಜಿಲ್ಲೆ, ಶೃಂಗೇರಿ ತಾಲೂಕು ಕಿಗ್ಗ ಗ್ರಾಮದಲ್ಲಿ ಋಷ್ಯಶೃಂಗ ದೇವಸ್ಥಾನದಲ್ಲಿ ಋಷ್ಯ ಶೃಂಗೇಶ್ವರನ ಹತ್ತಿರ ಜನರು ತಮ್ಮ ಬರಗಾಲವನ್ನು ನೀಗಿಸಿ, ನಮ್ಮ ಗ್ರಾಮದಲ್ಲಿ ಉತ್ತಮ ಮಳೆ-ಬೆಳೆ ಆಗುವ ಮೂಲಕ ನಮ್ಮ ಕೆರೆಗಳಿಗೆ ನೀರು ಬರುವಂತಾಗಲಿ ಎಂದು ದೇವರಲ್ಲಿ ಶತಾರುದ್ರಭಿಷೇಕ ಹಾಗೂ ಪರ್ಜನ್ಯ ಹೋಮ ಮಾಡಿಸುವ ಮೂಲಕ ಭಗವಂತನಲ್ಲಿ ಬೇಡಿಕೆ ಇಟ್ಟರು.
ಕಲ್ವಳ್ಳಿ ಭಾಗದ ದಿಂಡಾವರ ಗ್ರಾಮವು ಹಿರಿಯೂರು ತಾಲೂಕಿನಲ್ಲಿ ಅತ್ಯಂತ ಹೆಚ್ಚು ಬರಗಾಲವನ್ನು ಅನುಭವಿಸಿದ್ದು, ಕುಡಿಯುವ ನೀರಿಗೆ ಪ್ರತಿವರ್ಷ ತೊಂದರೆ ಆಗಿರುವುದು ನೋಡಬಹುದು ಆಗಿದೆ. ಈ ನಿಟ್ಟಿನಲ್ಲಿ ಕಲ್ವಳಿ ಭಾಗದ 16 ಕೆರೆಗಳನ್ನು ತುಂಬಿಸುವ ಕೆಲಸ ಅತಿ ಜರೂರಾಗಿ ಆಗಬೇಕು. ಅಂತರ್ಜಲ ಮಟ್ಟ ಹೆಚ್ಚಿದರೆ ಅಲ್ಲಿಯ ಕಷ್ಟ ಸಹಿಷ್ಣು ರೈತರಿಗೆ ಅನುಕೂಲವಾದೀತು.
ಈ ಸಂದರ್ಭದಲ್ಲಿ ದಿಂಡಾವರ ಗ್ರಾಮದ ನಾರಾಯಣಸ್ವಾಮಿ, ಸುರೇಶ್ ಗೌಡ, ಗಿರೀಶ್, ಚಂದ್ರಗಿರಿ ವಿರೂಪಾಕ್ಷ ಚಂದ್ರಶೇಖರ್ ತಿಪ್ಪೇಶ ಮುಂತಾದವರು ಇದ್ದರು. ಕಿಗ್ಗ ಋಷ್ಯ ಶೃಂಗೇಶ್ವರ ದೇವಸ್ಥಾನಕ್ಕೆ ಹೆಚ್ಚು ಚಿತ್ರದುರ್ಗ ಜಿಲ್ಲೆಯ ವಿವಿಧ ಗ್ರಾಮಗಳಿಂದ ಜನರು ಬರುತ್ತಾರೆಂದು ಅಲ್ಲಿನ ಅರ್ಚಕರು ತಿಳಿಸಿದರು.
