
ಹಿರಿಯೂರು :
ತಾಲ್ಲೂಕಿನ ಭೀಮನಬಂಡೆಯ ಯಾಜ್ಞವಲ್ಕ್ಯ ಪಬ್ಲಿಕ್ ಶಾಲೆಯು 2025-26 ನೇ ಸಾಲಿನ ಸಿ ಬಿ ಎಸ್ ಈ 10ನೇ ತರಗತಿ ಪರೀಕ್ಷೆಯಲ್ಲಿ ಫಲಿತಾಂಶವು ಪ್ರಕಟವಾಗಿದ್ದು, ಜೆ.ಕೆ.ಪಲ್ಲವಿ 96.4% ಅಂಕ ಪಡೆದು ತಾಲೂಕಿಗೆ ಪ್ರಥಮ ಸ್ಥಾನವನ್ನು ಪಡೆದಿದ್ದಾಳೆ.

ಆರ್.ನಿವೇದಿತಾ 96% ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಮತ್ತು ಆರ್.ರಶ್ಮಿ 93% ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ. ಒಬ್ಬ ವಿದ್ಯಾರ್ಥಿ ಇಂಗ್ಲೀಷಿನಲ್ಲಿ 100 ಕ್ಕೆ 100 ಅಂಕಗಳನ್ನು ಪಡೆದಿದ್ದು, ಒಟ್ಟಾರೆ 88 ವಿದ್ಯಾರ್ಥಿಗಳ ಪೈಕಿ 100 ಕ್ಕೆ 100 ರಷ್ಟು ಫಲಿತಾಂಶವನ್ನು ಸತತವಾಗಿ ಮೂರನೇ ವರ್ಷವೂ ಪಡೆದುಕೊಂಡಿದೆ.

ಅತಿಹೆಚ್ಚು ಅಂಕಗಳನ್ನು ಪಡೆದು ವಿದ್ಯಾಸಂಸ್ಥೆಗೆ ಕೀರ್ತಿ ತಂದ ಯಾಜ್ಞವಲ್ಕ್ಯ ಸಂಸ್ಥೆಯ ಅಧ್ಯಕ್ಷರಾದಂತಹ ಟಿ.ಸುರೇಶ್ ರವರು, ಆಡಳಿತ ಅಧಿಕಾರಿಗಳಾದ ಶ್ರೀನಿವಾಸಮೂರ್ತಿ, ಪ್ರಶಾಂತ್, ಪ್ರಾಂಶುಪಾಲರಾದ ಎಂ.ಎಸ್.ಶ್ರೀಶನ್, ಉಪಪ್ರಾಂಶುಪಾಲರಾದ ಬಿ.ವಿ.ರಾಕೇಶ್, ಶೈಕ್ಷಣಿಕ ಸಂಯೋಜಕರಾದ ಮಲ್ಲಿಕಾರ್ಜುನ ಮತ್ತು ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.
