April 16, 2026
00004

ಹಿರಿಯೂರು :

ದಲಿತ ಸ್ವಾಭಿಮಾನಿ ಸಮಿತಿ ಸಂಸ್ಥಾಪಕರು ಹಾಗೂ ರಾಜ್ಯಾ ಅಧ್ಯಕ್ಷರಾದ ಎಚ್.ನಾರಾಯಣಸ್ವಾಮಿರವರ ಆದೇಶದ ಮೇರೆಗೆ ಈ ದಿನ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿರುವಂತಹ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.

ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಪ್ರಯುಕ್ತ ಅನ್ನ ಸಂತರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ದಲಿತ ಸ್ವಾಭಿಮಾನಿ ಸಮಿತಿ ಚಿತ್ರದುರ್ಗ ಜಿಲ್ಲಾಧ್ಯಕ್ಷರಾದ ಕಣುಮೇಶ್, ಹಿರಿಯೂರು ತಾಲೂಕು ಅಧ್ಯಕ್ಷರಾದ ವಿಶ್ವನಾಥ್ (ಪಿಟ್ಲಾಲಿ), ತಾಲೂಕು ಉಪಾಧ್ಯಕ್ಷರಾದ ರಾಜು, ಹಾಗೂ ದಲಿತ ಸ್ವಾಭಿಮಾನಿ ಸಮಿತಿಯ ಎಲ್ಲಾ ಪದಾಧಿಕಾರಿಗಳು ಹಾಗೂ ದಲಿತ ಮುಖಂಡರುಗಳು ಭಾಗವಹಿಸಿದ್ದರು.

About The Author

Leave a Reply

Your email address will not be published. Required fields are marked *