October 26, 2026
00002

ಹಿರಿಯೂರು :

ನಗರದಲ್ಲಿ ಬಾಲಕಿಯರ ಪದವಿ ಪೂರ್ವ ಕಾಲೇಜು ಹಾಗೂ ಜ್ಯೂನಿಯರ್ ಕಾಲೇಜಿನಲ್ಲಿ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯ ಮತಗಟ್ಟೆಗಳಲ್ಲಿ ಪದವೀಧರ ಮತದಾರರು ತೆರಳಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸುವ ಮೂಲಕ ಚುನಾವಣಾ ಮತದಾನವವನ್ನು ಯಶಸ್ವಿಗೊಳಿಸಿದರು.

ನಗರದ ಮತಗಟ್ಟೆಗಳ ಮುಂಭಾಗದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಮತ ಚಲಾಯಿಸಲು ಬರುವ ಮತದಾರರನ್ನು ತಮ್ಮ ಪಕ್ಷಕ್ಕೆ ಮತ ಹಾಕುವಂತೆ ಮನವಿ ಮಾಡುತ್ತಿದ್ದರು, ಇದರಿಂದ ನಗರದೆಲ್ಲಡೆ ಚುನಾವಣೆಯ ಬಿರುಸು ಹೆಚ್ಚಾಗಿ ನಗರದಲ್ಲಿ ಅತ್ಯಂತ ಜನಜಂಗುಳಿ ಸರ್ವೇಸಾಮಾನ್ಯವಾಗಿ ಕಂಡು ಬಂದಿತು.

About The Author

Leave a Reply

Your email address will not be published. Required fields are marked *