October 28, 2026
0002

ಹಿರಿಯೂರು:

ತಾಲೂಕಿನ ಹಿರಿಯ ರಂಗಭೂಮಿ ಕಲಾವಿದ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಜಿ.ಡಿ.ತಿಮ್ಮಯ್ಯ ಹರಿಯಬ್ಬೆ ಅವರಿಗೆ ಕರ್ನಾಟಕ ಸರ್ಕಾರ ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಎಂಬುದಾಗಿ ತಾಲೂಕು ವಕೀಲರ ಸಂಘದ ಮಾಜಿ ಜಂಟಿಕಾರ್ಯದರ್ಶಿ ಕೆ.ರಾಜಪ್ಪ ಒತ್ತಾಯಿಸಿದ್ದಾರೆ. 

ಜಿ.ಡಿ.ತಿಮ್ಮಯ್ಯನವರು 60ರ ದಶಕದಿಂದ ಇಲ್ಲಿಯವರೆಗೆ ಸಾವಿರಾರು ನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ, ರಂಗಗೀತೆಗಳನ್ನು ರಚಿಸಿ ಸಂಗೀತ ಸಂಯೋಜನೆ ಮಾಡಿದ್ದಾರೆ ಇವರ ರಂಗ ಸೇವೆಯನ್ನು ಗುರುತಿಸಿ ರಂಗಭೂಮಿ ಕ್ಷೇತ್ರದಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕೆಂದು ಕೆ.ರಾಜಪ್ಪ ಒತ್ತಾಯಿಸಿದ್ದಾರೆ.

About The Author

Leave a Reply

Your email address will not be published. Required fields are marked *