October 28, 2026
0001

ಹಿರಿಯೂರು :

ಮನುಷ್ಯ ವಿಶ್ವದ ಯಾವುದೇ ದೇಶದಲ್ಲಿ ವಾಸಿಸಲಿ ಆಯಾ ದೇಶದ ಭಾಷೆಗಳನ್ನು ಕಲಿತಾಗ ಮಾತ್ರ ಅಲ್ಲಿ ತನ್ನ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ, ಈ ನಿಟ್ಟಿನಲ್ಲಿ ಭಾಷೆಯು ವ್ಯಕ್ತಿ ವ್ಯಕ್ತಿಗಳ ನಡುವೆ ಬೆಸುಗೆಯನ್ನು ಬೆಸೆಯುತ್ತದೆ ಎಂಬುದಾಗಿ ವಾಣಿಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಬಿ.ಆರ್. ಹೇಮಲತಾ ಹೇಳಿದರು.

ನಗರದ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪಿ.ಎಂ.ಉಷಾ ಯೋಜನೆ ಅಡಿಯಲ್ಲಿ ಇಂಗ್ಲಿಷ್ ವಿಭಾಗ ಐ ಕ್ಯೂ ಎಸಿ ಘಟಕ ಆಯೋಜಿಸಿದ್ದ ಸ್ಪೋಕನ್ ಇಂಗ್ಲೀಷ್ ಸರ್ಟಿಫಿಕೇಟ್ ಕೋರ್ಸ್ ಕಾರ್ಯಕ್ರಮವನ್ನು ಉದ್ಘಾಟಿಸಿ, ನಂತರ ಅವರು ಮಾತನಾಡಿದರು.

ಭಾಷೆ ಒಂದು ಸಂವಹನ ಮಾಧ್ಯಮವಾಗಿದ್ದು, ಇದು ಮನುಷ್ಯ ತನ್ನ ಭಾವನೆಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಸಹಕಾರಿಯಾಗಿದ್ದು, ಸಮಾಜದಲ್ಲಿ ವ್ಯಕ್ತಿ ವ್ಯಕ್ತಿಗಳ ನಡುವೆ ಸಂವಹನ ಮಾಧ್ಯಮವಾಗಿ ಕಾರ್ಯನಿರ್ವಹಿಸುವ ಭಾಷೆಯು ಸಮಾಜದ ಜನರ ನಡುವೆ ಅನ್ಯೋನ್ಯ ಬಾಂಧವ್ಯವನ್ನು ಬೆಳೆಸಲು ಸಹಕಾರ ನೀಡುತ್ತದೆ ಎಂದು ಹೇಳಿದರು.

ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಆರ್‌.ಅನಿಲ್ ಕುಮಾರ್ ಮಾತನಾಡಿ,  15 ದಿನ ನಡೆಯುವ ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್ ನಲ್ಲಿ ವಿದ್ಯಾರ್ಥಿಗಳು ಇಂಗ್ಲೀಷ್ ಭಾಷೆಯಲ್ಲಿ ಮಾತನಾಡುವುದನ್ನು ಸಂಪೂರ್ಣವಾಗಿ ಕಲಿತು ಇದರ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಐಕ್ಯೂ ಎಸಿ ಸಂಚಾಲಕರಾದ ಮಹಮದ್ ಸಾದತ್, ಪಿಎಂ ಉಷಾ ಯೋಜನೆಯ ಸಂಚಾಲಕರಾದ ಡಾ.ಎ.ದೇವಿಕ, ಸಹಸಂಚಾಲಕರಾದ ಎಸ್.ಎಲ್.ಎನ್.ಮೂರ್ತಿ, ಕಚೇರಿ ಅಧೀಕ್ಷಕ ಪಿ.ಎನ್.ನರಸಿಂಹಮೂರ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *