October 6, 2026
000001

ಹಿರಿಯೂರು :

ನಗರವನ್ನು ಪ್ಲಾಸ್ಟಿಕ್‌ ಮುಕ್ತ ನಗರವಾಗಿ ಮಾಡುವ ಮೂಲಕ ಪರಿಸರಸ್ನೇಹಿ ಮಾದರಿ ನಗರವಾಗಿ ಮಾಡಬೇಕೆಂಬ ಉದ್ದೇಶದಿಂದ  ನಗರ ವ್ಯಾಪ್ತಿಯಲ್ಲಿನ ಗಾಂಧಿಸರ್ಕಲ್‌, ಹೂವಿನ ಮಾರುಕಟ್ಟೆ ಬಳಿಯ  ವಿವಿಧ ಅಂಗಡಿಗಳನ್ನು ಪರಿಶೀಲಿಸಲಾಗುತ್ತಿದೆ ಎಂಬುದಾಗಿ ನಗರಸಭೆಯ ಪೌರಾಯುಕ್ತರಾದ ಎ.ವಾಸೀಂ ರವರು ಹೇಳಿದರು.

ನಗರದ ವಿವಿಧೆಡೆಯ ವಿವಿಧ ಅಂಗಡಿಗಳನ್ನು ಪರಿಶೀಲಿಸಿ, 10 ರಿಂದ 15 ಮಾರಾಟಗಾರರಿಗೆ  ರೂ 5,800/- ಗಳನ್ನು ದಂಡ ವಿಧಿಸಿ, ನಂತರ ಅವರು ಮಾತನಾಡಿದರು.  

ಹೂಮಾರಾಟಗಾರರು ನಿಷೇದಿತ ಏಕಬಳಕೆ ಪ್ಲಾಸ್ಟಿಕ್ ಮುಕ್ತಅಭಿಯಾನವನ್ನು ಯಶಸ್ವಿಗೊಳಿಸಲು ನಗರವನ್ನು ಪ್ಲಾಸ್ಟಿಕ್‌ ಮುಕ್ತ ನಗರವನ್ನಾಗಿ ಮಾಡಲು ಸಾರ್ವಜನಿಕರು ನಗರಸಭೆಯೊಂದಿಗೆ ಕೈಜೋಡಿಸಬೇಕು, ಸರ್ಕಾರದ ನಿಯಮ ಉಲ್ಲಂಘವಾದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳ ಕಟ್ಟು ನಿಟ್ಟಿನ ಆದೇಶದಂತೆ  ನಿಯಮಾನುಸಾರ ನಿಗಧಿತ ದಂಡ ವಿಧಿಸಲಾಗುವುದು ಎಂಬುದಾಗಿ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಕರುಗಳಾದ ಅಶೋಕ್ ಕುಮಾರ್, ಮಹಾಲಿಂಗರಾಜು, ಮತ್ತು ಸ್ವಚ್ಛತಾ ಕಾರ್ಮಿಕರುಗಳು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *