October 5, 2026
002

ಹಿರಿಯೂರು :

ತಾಲೂಕಿನಲ್ಲಿ ಕಳೆದ 4-5 ವರ್ಷಗಳಿಂದ ನಿರಂತರವಾಗಿ ಕೆರೆಗಳಿಗೆ ನೀರು ತುಂಬಿಸುವಂತೆ ವಿವಿಧ ಮಾದರಿಯಲ್ಲಿ ನಿರಂತರ ಹೋರಾಟ ಮಾಡುತ್ತಾ ಬಂದಿದ್ದೇವೆ ಆದರೆ ಇದುವರೆಗೂ ಕೆರೆಗಳಿಗೆ ನೀರು ತುಂಬಿಸಿರುವುದಿಲ್ಲ, ತಾಲೂಕಿನ 4 ಹೋಬಳಿಗಳ ಕೆರೆಗಳಿಗೆ ನೀರು ತುಂಬಿಸದೆ ಇದ್ದರೆ ಬೈ ಎಲೆಕ್ಷನ್ ನಲ್ಲಿ ನೋಟಕ್ಕೆ ಮತ ಹಾಕಿ ಚುನಾವಣೆಯನ್ನು ರದ್ದುಗೊಳಿಸುತ್ತೇವೆ ಎಂಬುದಾಗಿ ರೈತಸಂಘದ ಜಿಲ್ಲಾಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ ಎಚ್ಚರಿಸಿದ್ದಾರೆ.

ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ತಾಲೂಕಿನ 4 ಹೋಬಳಿಗಳ ಕೆರೆಗಳಿಗೆ ನೀರು ತುಂಬಿಸದೆ ಇದ್ದರೆ ಬೈ ಎಲೆಕ್ಷನ್ ನಲ್ಲಿ ನೋಟಕ್ಕೆ ಮತ ಹಾಕಿ ಚುನಾವಣೆಯನ್ನು ರದ್ದುಗೊಳಿಸಲು ಒತ್ತಾಯಿಸಿ, ತಾಲ್ಲೂಕು ತಹಶೀಲ್ದಾರರ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರಿಗೆ ಮನವಿಪತ್ರ ಸಲ್ಲಿಸಿ, ನಂತರ ಅವರು ಮಾತನಾಡಿದರು.

ವಾಣಿವಿಲಾಸ ಜಲಾಶಯಕ್ಕೆ ಪ್ರತಿ ವರ್ಷ ಐದು ಟಿಎಂಸಿ ನೀರು ಮೀಸಲು ಬೇಕು ಈ ವರ್ಷ ಭದ್ರಾ ಜಲಾಶಯದಿಂದ ಎರಡು ಟಿಎಂಸಿ ನೀರು ಹರಿಸಬೇಕು, ಜೆಜೆ ಹಳ್ಳಿ ಹೋಬಳಿಯ ಕಲ್ವಳ್ಳಿ ಭಾಗದ ಗಾಯತ್ರಿ ಜಲಾಶಯ ಸೇರಿ 16 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಯನ್ನು ತುರ್ತಾಗಿ ಪ್ರಾರಂಭಿಸಿ ನೀರು ಹರಿಸಬೇಕು

ಕಸಬಾ ಹಾಗೂ ಐಮಂಗಳ ಭಾಗದ ಕೆರೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಯನ್ನು ತುರಿತಗತಿಯಲ್ಲಿ ಮುಗಿಸಿ ಕೆರೆಗಳಿಗೆ ತುಂಬಿಸಬೇಕು,ಧರ್ಮಪುರ ಹೋಬಳಿಯ ವಿವಿಧ ಕೆರೆಗಳಿಗೆ ಏತ ನೀರಾವರಿ ಮಾಡಿದ್ದು ಈ ಕೆರೆಗಳಿಗೆ ವಾಟರ್ ಅಲೋಕೇಶನ್ ಮಾಡಬೇಕು ಮತ್ತು ಇನ್ನೂ ಉಳಿದ ಕೆರೆಗಳಿಗೆ ಪೈಪ್ ಲೈನ್ ಕಾಮಗಾರಿ ಮಾಡಿ ನೀರು ತುಂಬಿಸಬೇಕು

ವಾಣಿವಿಲಾಸ ಜಲಾಶಯದಿಂದ ಯಾವುದೇ ಭಾಗಕ್ಕೂ ವಾಟರ್ ಅಲೊಕೇಶನ್ ಮಾಡಬಾರದು ವಾಣಿವಿಲಾಸ ಸಕ್ಕರೆ ಕಾರ್ಖಾನೆಯನ್ನು ಪುನಃ ಚೇತನ ಉಳಿಸಬೇಕು, ನಮ್ಮ ಎಲ್ಲ ಒತ್ತಾಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಎಲ್ಲಾ ಕಾಮಗಾರಿಗಳನ್ನು ಮಾಡಿ ನೀರು ಹರಿಸದೆ ಹೋದರೆ ಮುಂದೆ ಬರುವ ಬೈಎಲೆಕ್ಷನ್ ನಲ್ಲಿ ನೋಟಕ್ಕೆ ಮತಹಾಕಿ ಚುನಾವಣೆಯನ್ನು ರದ್ದುಗೊಳಿಸಬೇಕಾಗುತ್ತದೆ ಎಂಬುದಾಗಿ ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ರೈತಸಂಘದ ಜಿಲ್ಲಾಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ,  ತಾಲೂಕು ಅಧ್ಯಕ್ಷ ವೆಂಕಟೇಶ್, ಆಲೂರು ಸಿದ್ದರಾಮಣ್ಣ, ವೀರಣ್ಣಗೌಡ, ಕನ್ಯಪ್ಪ, ಎಂ.ಆರ್.ಈರಣ್ಣ, ಜೆಜೆ ಹಳ್ಳಿ ಹೋಬಳಿ ಅಧ್ಯಕ್ಷ ಈರಣ್ಣ, ಸಣ್ಣತಿಮ್ಮಣ್ಣ, ವಿರುಪಾಕ್ಷಪ್ಪ, ಮಂಜುನಾಥ್, ಬಾಲಕೃಷ್ಣ ಧರ್ಮಪುರ, ಹೊರಕೇರಪ್ಪ, ಜಗನ್ನಾಥ್, ಗಿರೀಶ್, ನಿಂಗಪ್ಪ, ಆರ್.ಕೆ.ಗೌಡ, ನಿರಂಜನ್, ಗೋವಿಂದಪ್ಪ, ಸಿಂಪಣ್ಣ ಇತರರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *