October 6, 2026
00002

ಹಿರಿಯೂರು :

ಕೆ.ಆರ್.ಹಳ್ಳಿ ಬಳಿ ಇರುವ ಶಾಯಿ ಗಾರ್ಮೆಂಟ್ಸ್ ಮತ್ತು ಎ.ಎಂ.ಡಿ ಗೌರ್ಮೆಂಟ್ ನಲ್ಲಿ ಸರಿಸುಮಾರು 2000 ದಿಂದ 3000 ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು, ಇಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ತಮ್ಮದೇ ಆದ ಕೌಟುಂಬಿಕ ತೊಂದರೆಗಳಿದ್ದು, ಮೂರು ವರ್ಷದವರೆಗೂ ಪಿ.ಎಫ್.ಹಣವನ್ನು ಹಿಡಿದುಕೊಳ್ಳಬಾರದು ಎಂಬುದಾಗಿ ಕರವೇ ಗೌರವ ಅಧ್ಯಕ್ಷರಾದ ಗೋ.ಬಸವರಾಜ್ ಹೇಳಿದರು.

ತಾಲ್ಲೂಕಿನ ಕೆ.ಆರ್.ಹಳ್ಳಿ ಗೇಟ್ ಬಳಿ ಇರುವ ಶಾಹಿ ಗಾರ್ಮೆಂಟ್ ಹಾಗೂ ಎ.ಎಂ.ಡಿ ಗಾರ್ಮೆಂಟ್ಸ್ ಮುಂಭಾಗದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ಪಿ.ಎಫ್.ಕಾಯ್ದೆ ಹೊಸ ತಿದ್ದುಪಡಿ ತಂದಿರುವ ಬಗ್ಗೆ ವಿರೋಧಿಸಿ,ಪ್ರತಿಭಟನೆ ನಡೆಸಿ, ತಾಲ್ಲೂಕು ತಹಶೀಲ್ದಾರರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಕೇಂದ್ರ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಿ, ನಂತರ ಅವರು ಮಾತನಾಡಿದರು.

ಕೇಂದ್ರ ಸರ್ಕಾರ ಕೂಡಲೇ ಹೊಸ ಪಿಎಫ್ ಕಾಯ್ದೆಯನ್ನು ಹಿಂಪಡೆದು, ಈ ಹಿಂದೆ ಇದ್ದ ಪಿಎಫ್ ಕಾಯ್ದೆಯನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಿಕೊಂಡು ಹೋಗಬೇಕು ನಮ್ಮ ಪಿ.ಎಫ್. ಹಣವನ್ನು 3ವರ್ಷಗಳು ಹಿಡಿದಿಡದೆ, ಕೇಂದ್ರ ಸರ್ಕಾರ ಕಾರ್ಮಿಕರ ಪರವಾಗಿ ನಿಂತು ಪಿ.ಎಫ್.ಕಾಯ್ದೆ ರೂಪಿಸಬೇಕು ಎಂಬುದಾಗಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕರವೇ ತಾಲ್ಲೂಕು ಅಧ್ಯಕ್ಷರಾದ ರಾಮಕೃಷ್ಣಪ್ಪ, ಗೌರವ ಅಧ್ಯಕ್ಷರಾದ ಗೋ.ಬಸವರಾಜ್, ಪ್ರಧಾನ ಕಾರ್ಯದರ್ಶಿ ಡಿ.ಕೆ.ಎಸ್.ದಾದಾಪೀರ್, ನಗರಾಧ್ಯಕ್ಷರಾದ ಮಹಮ್ಮದ್ ಜಾಕಿರ್, ನಗರ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಸುಹೇಲ್, ಭಾಗ್ಯಮ್ಮ ,ಮಹಾಲಕ್ಷ್ಮಿ ,ಗೌತಮಿ, ಮಮತ,ಜ್ಯೋತಿ, ರೇಣುಕಾ, ಹನುಮಕ್ಕ, ಉಮಾ,ಕವಿತಾ,ಲಕ್ಷ್ಮೀದೇವಿ ,ಕಾವ್ಯ, ಮಮತಾ ,ಜಾನಕಿ ,ಸಂಧ್ಯಾ ರಾಣಿ ,ಉಷಾ ,ರಾಧಾ ,ಕುಸುಮ ,ಸಂಗೀತ, ಲಕ್ಷ್ಮಿ ,ವಿಜಯಲಕ್ಷ್ಮಿ,ಆಫ್ರಿದ್, ರಂಜಿತ, ರಾಜಣ್ಣಗೌಡ್ರು, ಗಿರೀಶ್, ವಿಶ್ವ, ಪಾತಲಿಂಗಪ್ಪ, ರಾಜಣ್ಣ, ಶ್ರೀಧರ್, ಕಿರಣ್,ಇನ್ನು  2ಸಾವಿರಕ್ಕೂ ಹೆಚ್ಚು ಜನರು  ಹಾಜರಿದ್ದರು.

About The Author

Leave a Reply

Your email address will not be published. Required fields are marked *