October 6, 2026
0001

ಹಿರಿಯೂರು :

ಭಾರತದ ಸ್ವಾತಂತ್ರ್ಯ ಹೋರಾಟದ ಪ್ರಮುಖ ಕ್ರಾಂತಿಕಾರಿಗಳಲ್ಲಿ ಒಬ್ಬರಾದ ಭಗತ್ ಸಿಂಗ್ ಅವರು 1907 ಸೆಪ್ಟೆಂಬರ್ 28 ರಂದು ಜನಿಸಿದರು, ಬಾಲ್ಯದಿಂದಲೇ ದೇಶದ ಸ್ವಾತಂತ್ರ್ಯ ಮತ್ತು ಬ್ರಿಟಿಷರ ಆಡಳಿತದ ವಿರುದ್ಧದ ಹೋರಾಟಕ್ಕೆ ಮುಂದಾದ ಭಗತ್ ಸಿಂಗ್ ರವರ ಧೈರ್ಯ, ಸಾಹಸ, ಶೌರ್ಯ ಇಂದಿನ ಯುವಪೀಳಿಗೆಗೆ ಸ್ಪೂರ್ತಿಯಾಗಿದೆ ಎಂಬುದಾಗಿ ರೆಡ್ ಫೌಂಡೇಶನ್ ಕಾರ್ಯದರ್ಶಿಯಾದ ಅಂಬಿಕಾ ಹೇಳಿದರು.

ನಗರದ ರೆಡ್ ಫೌಂಡೇಶನ್ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ “ಭಗತ್ ಸಿಂಗ್” ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ “ಭಗತ್ ಸಿಂಗ್”ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ನಂತರ ಅವರು ಮಾತನಾಡಿದರು.

ಕ್ರಾಂತಿಕಾರಿಗಳಾದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರನ್ನು 1931 ಮಾರ್ಚ್ 23 ರಂದು ಲಾಹೋರ್ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು ಅವರಿಗೆ ಆಗ 23 ವರ್ಷ, ಭಗತ್ ಸಿಂಗ್ ಅವರ ಜೀವನ ದೇಶಭಕ್ತಿ ಧೈರ್ಯ ತ್ಯಾಗ ಮತ್ತು ವಿಚಾರಶೀಲತೆಯ ಸಂಕೇತವಾಗಿ ಭಾರತೀಯ ಇತಿಹಾಸದಲ್ಲಿ ಅಚ್ಚಳಿಯದೆ  ಉಳಿದಿದೆ ಎಂಬುದಾಗಿ ಹೇಳಿದರು.

ಈ ಸಂದರ್ಭದಲ್ಲಿ ರೆಡ್ ಫೌಂಡೇಶನ್ ಅಧ್ಯಕ್ಷರಾದ ರಾಮಕೃಷ್ಣ, ಖಜಾಂಚಿಯಾದ ದಯಾನಂದ, ಹಾಗು ಹಿರಿಯರಾದ ಡಿ.ನರಸಿಂಹಮೂರ್ತಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *