
ಹಿರಿಯೂರು :
ನಗರದಲ್ಲಿ ಹಿಂದೂ ಮಹಾಗಣಪತಿಯು ವರ್ಷದಿಂದ ವರ್ಷಕ್ಕೆ ತುಂಬಾ ಜನರ ಮೆಚ್ಚುಗೆ ಗಳಿಸಿ, ಹೆಚ್ಚು ಹೆಚ್ಚು ಭಕ್ತಾದಿಗಳನ್ನು ತನ್ನೆಡೆಗೆ ಸೆಳೆಯುತ್ತಿದ್ದು, ಈ ವೇದಿಕೆಯಿಂದ ನಡೆಯುತ್ತಿರುವ ಬೈಕ್ ರ್ಯಾಲಿ ಹಾಗೂ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಯಶಸ್ವಿಯಾಗಲಿ ಎಂಬುದಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಆಲೂರು ಹನುಮಂತರಾಯಪ್ಪ ಶುಭಹಾರೈಸಿದರು.
ನಗರದ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಕಾರ್ಯಕರ್ತರಿಂದ ಪ್ರತಿಷ್ಠಾಪನೆಗೊಂಡಿರುವ ಹಿಂದೂ ಮಹಾಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ, ನಂತರ ಸತ್ಯಟಿವಿ ರಿಪೋರ್ಟರ್ ಯಳನೀರು ವೆಂಕಟೇಶ್ ರವರೊಂದಿಗೆ ಅವರು ಮಾತನಾಡಿದರು.

ಹಿಂದೂ ಮಹಾಗಣಪತಿಯ ಕೃಪೆಯಿಂದ ಕಳೆದ 50 ವರ್ಷಗಳ ಈ ಭಾಗದ ರೈತರ ಹೋರಾಟಕ್ಕೆ ಫಲ ಸಿಕ್ಕಿದ್ದು,ಈಗಾಗಲೇ ತಾಲ್ಲೂಕಿಗೆ ಭದ್ರಾ ನೀರು ಹರಿಯುತ್ತಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಯ ನೀರಾವರಿ ಹೋರಾಟಗಾರರು ಹಾಗೂ ರೈತಹೋರಾಟಗಾರರು ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಮಾಜಿ ಸಚಿವರಾದ ದಿ.ಡಿ.ಸುಧಾಕರ್, ಸಚಿವರಾದ ಟಿ.ರಘುಮೂರ್ತಿ ಸೇರಿದಂತೆ ಹಲವಾರು ಜನಪ್ರತಿನಿಧಿಗಳು, ಶಾಸಕರುಗಳ ಪರಿಶ್ರಮದಿಂದ ರಾಜ್ಯ ಸರ್ಕಾರ ವಾಣಿವಿಲಾಸ ಸಾಗರಕ್ಕೆ ಭದ್ರಾ ನೀರು ಹರಿಸಿದ್ದು, ತಾಲ್ಲೂಕು ಇನ್ನು ಮುಂದೆ ಸಮೃದ್ಧವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಸತ್ಯಟಿವಿ ರಿಪೋರ್ಟರ್ ಯಳನೀರು ವೆಂಕಟೇಶ್, ವಿಶ್ವ ಹಿಂದೂ ಪರಿಷತ್ ಹಾಗೂ ಹಿಂದೂ ಗಣಪತಿ ಪೂಜಾ ಸಮಿತಿ ಮುಖಂಡರಾದ ಪ್ರಶಾಂತ್, ಅಮರನಾಥ್, ಶ್ರೀನಿವಾಸ್, ಜೋದಾ ಸಿಂಗ್, ನಿರ್ವಾಣ ಪ್ರಶಾಂತ್, ಭೋಜರಾಜ, ಗೋವಿಂದಾಚಾರ್ಯ, ಚೇತನ್ ಆಲೂರು, ಜಿಲ್ಲಾ ಕಾರ್ಯದರ್ಶಿ ವೆಂಕಟೇಶ್, ಸೇರಿದಂತೆ ಇತರರು ಉಪಸ್ಥಿತರಿದ್ದರು.
