October 6, 2026
00002

ಹಿರಿಯೂರು :

ನಮ್ಮ ಕೆಂಪೇಗೌಡ ಪತ್ತಿನ ಸಹಕಾರ ಸಂಘವು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗದೆ, ಎಲ್ಲಾ ಸಮುದಾಯದ ಜನರ ಆರ್ಥಿಕ ಹಾಗೂ ಸಾಮಾಜಿಕ ಪ್ರಗತಿಗೆ ಶ್ರಮಿಸುವ ಉದ್ದೇಶವನ್ನು ಹೊಂದಿದೆ ಎಂಬುದಾಗಿ ಕೆಂಪೇಗೌಡ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕಂದೀಕೆರೆ ಜಗದೀಶ್ ಹೇಳಿದರು.

ನಗರದ ಕೆಂಪೇಗೌಡ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಸಂಘದ 2025-26 ನೇ ಸಾಲಿನ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ಸದಸ್ಯರು ಹಾಗೂ ಸಿಬ್ಬಂದಿಯ ಸಹಕಾರ ಮತ್ತು ಪರಿಶ್ರಮದಿಂದ 2025-26 ನೇ ಸಾಲಿನಲ್ಲಿ ಸಂಘವು 1.75 ಕೋಟಿ ವಹಿವಾಟು ನಡೆಸಿದ್ದು, 78 ಸಾವಿರ ರೂಗಳ ಲಾಭ ಗಳಿಸಿದೆ, ಸಂಘದಲ್ಲಿ 1025 ಷೇರುದಾರರು, 256 ಉಳಿತಾಯ ಖಾತೆ ಹಾಗೂ 63 ಚಾಲ್ತಿ ಖಾತೆಗಳಿದ್ದು, ಸಂಘವು ಪ್ರಗತಿಯತ್ತ ಸಾಗುತ್ತಿದೆ, ಸಂಘದ ಮತ್ತಷ್ಟು ಅಭಿವೃದ್ಧಿಗೆ ಸದಸ್ಯರು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂಬುದಾಗಿ ಮನವಿ ಮಾಡಿದರು.

ಈ ಸಭೆಯಲ್ಲಿ ಕೆಂಪೇಗೌಡ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ವಿ.ಮನ್ಮಥ, ನಿರ್ದೇಶಕರಾದ ಸಿ.ಶಿವಕುಮಾರ್, ಎಂ.ಎಸ್.ಮಹಾಲಿಂಗಯ್ಯ, ವಿ.ಕಲ್ಪನಾ, ಎಚ್.ಎಸ್.ಶಾಂತರಾಜಯ್ಯ, ಎನ್.ರಾಧಾಕೃಷ್ಣನ್, ಕುಮಾರಸ್ವಾಮಿ, ಕೆ.ವಿ.ದಯಾನಂದ್, ಮಾನಸಗೌಡ, ಟಿ.ಕೃಷ್ಣಮೂರ್ತಿ, ಪ್ರಭಾರ ಕಾರ್ಯದರ್ಶಿ ಎಂ.ಸಿದ್ದಾರ್ಥ್ ಸೇರಿದಂತೆ ಷೇರುದಾರರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *