September 13, 2026
0001

ಹಿರಿಯೂರು :

“ಗುರುತ್ವಾಕರ್ಷಣೆ ಹಾಗು ವೇಗದಿಂದ ಕಾಲವು ಹಿಗ್ಗುತ್ತದೆ ಎಂಬುದನ್ನು ‘ಕಾಲ’ದ  ಮೇಲೆ ಮಾತ್ರ ಸ್ವತಂತ್ರವಾಗಿ ಪ್ರಯೋಗ ಮಾಡಿ ತೋರಿಸಿದರೆ ನಾನು ನನ್ನ ‘ಸರಸ್ವತಿಪುತ್ರ’ ಎಂಬ ಬಿರುದನ್ನು ತ್ಯಜಿಸುವುದಲ್ಲದೆ, ಬರವಣಿಗೆಯನ್ನು ಸಹ ನಿಲ್ಲಿಸುತ್ತೇನೆ ಎಂದು ಖ್ಯಾತ ಬರಹಗಾರ ಡಿ ಸಿ ಪಾಣಿ ಇಂದು ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ ಸವಾಲು ಹಾಕಿದ್ದಾರೆ.

“ಜಿ.ಪಿ.ಎಸ್ ಉಪಗ್ರಹಗಳಲ್ಲಿ ಕಂಡು ಬರುವ ಒಂದು ದಿನಕ್ಕೆ 38 ಮೈಕ್ರೋ ಸೆಕೆಂಡ್ ವ್ಯತ್ಯಾಸವನ್ನು ಸರಿಪಡಿಸಲಾಗುತ್ತಿದೆ. ಸರಿಪಡಿಸುತ್ತಿರುವುದು ಗಡಿಯಾರವನ್ನೇ ಹೊರತು ಕಾಲವನ್ನಲ್ಲ” ಎಂದು ಹೇಳಿದ ಅವರು ಮುಂದುವರೆದು, “ಗಡಿಯಾರ ಸೂಚಿಸುವುದೇ ಕಾಲ” ಎನ್ನುವ ಐನ್ ಸ್ಟೈನ್ ಅವರ ವ್ಯಾಖ್ಯಾನವನ್ನು ಪಾಣಿ ನಿರಾಕರಿಸಿದ್ದಾರೆ.

About The Author

Leave a Reply

Your email address will not be published. Required fields are marked *