September 10, 2026
0004

ಹಿರಿಯೂರು :

ದುಷ್ಟ ಶಿಕ್ಷೆ, ಶಿಷ್ಟ ರಕ್ಷಣೆಗಾಗಿ ಅವತಾರ ತಾಳಿದ ಶ್ರೀಕೃಷ್ಣನ ಸಂದೇಶಗಳು ಸರ್ವಕಾಲೀಕವಾಗಿದ್ದು, ಶ್ರೀಕೃಷ್ಣನು ಅರ್ಜುನನಿಗೆ ಬೋಧಿಸಿದ ಭಗವದ್ಗೀತೆಯ ಸಾರಾಂಶವನ್ನು ಇಂದಿನ ಪ್ರತಿಯೊಬ್ಬ ವಿದ್ಯಾರ್ಥಿಗಳು ತಿಳಿಯಬೇಕಿದೆ ಎಂಬುದಾಗಿ ಕಾಡುಗೊಲ್ಲ ಸಮಾಜದ ಯುವಮುಖಂಡ ಎನ್.ಧನಂಜಯ ಹೇಳಿದರು. 

ಹುಳಿಯಾರು ರಸ್ತೆಯಲ್ಲಿರುವ ಎನ್‌.ಡಿ.ಎ ಜನಸಂಪರ್ಕ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ “ಶ್ರೀಕೃಷ್ಣಜನ್ಮಾಷ್ಟಮಿ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಅವರು ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಕಾಡುಗೊಲ್ಲ ಸಮಾಜದ ಯುವಮುಖಂಡ ಎನ್.ಧನಂಜಯ, ಪ್ರಕಾಶ್, ರುದ್ರೇಶ್, ಮೂಡಲಗಿರಿಯಪ್ಪ, ಪ್ರಜ್ವಲ್ ಯಾದವ್, ಸಂತೋಷ್, ಶಶಿಕುಮಾರ್, ನಾಗೇಂದ್ರಪ್ಪ, ಶಶಿಕುಮಾರ್, ಪಾರ್ಥಯಾದವ್, ನಾಗರಾಜ್, ಸಿದ್ದೇಶ್,,ಕುಮಾರ್,,ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಪ್ರಯುಕ್ತ ಸಾರ್ವಜನಿಕರಿಗೆ ವಿಶೇಷ ಪ್ರಸಾದ ವ್ಯವಸ್ಥೆ ಏರ್ಪಡಿಸಲಾಗಿತ್ತು.

ಫೊಟೋ ಇದೆ-04

About The Author

Leave a Reply

Your email address will not be published. Required fields are marked *