September 10, 2026
0006

ಹಿರಿಯೂರು :

ಸರಳ ಸಜ್ಜನಿಕೆ ಈ ದೇಶ ಕಂಡಂತಹ ಪ್ರಬುದ್ಧ ನಾಯಕ ಸತೀಶ್ ಜಾರಕಿಹೊಳಿರವರ ಮನೆ ಮೇಲೆ ಇಡಿ ಮತ್ತು ಸಿಬಿಐ ದಾಳಿ ನಡೆಸುವ ಮೂಲಕ ಅವರ ನೈತಿಕತೆಯನ್ನು ಕಡಿಮೆ ಮಾಡಿ, ಅವರ ಮನಸ್ಥೈರ್ಯವನ್ನು ಕುಗ್ಗಿಸುವಂತಹ ಕೆಲಸ ಮಾಡುತ್ತಿರುವ ಕೇಂದ್ರ ಸರ್ಕಾರದ ನಡೆ ನಿಜಕ್ಕೂ ಖಂಡನೀಯ ಎಂಬುದಾಗಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಮಂಜುನಾಥ್ ಮಾಳಿಗೆ ಹೇಳಿದರು.

ನಗರದ ಪ್ರವಾಸಿಮಂದಿರದಲ್ಲಿ ಸರಳ ಸಜ್ಜನಿಕೆ ಈ ದೇಶ ಕಂಡಂತಹ ಪ್ರಬುದ್ಧ ನಾಯಕ ಸತೀಶ್ ಜಾರಕಿಹೊಳಿರವರ ಮನೆ ಮೇಲೆ ಇಡಿ ಮತ್ತು ಸಿಬಿಐ ದಾಳಿ ನಡೆಸಿರುವ ಕೇಂದ್ರಸರ್ಕಾರದ ನಡೆಯನ್ನು ವಿರೋಧಿಸಿ, ವಾಲ್ಮೀಕಿ ಸಮುದಾಯ, ಸತೀಶ್ ಜಾರಕಿಹೊಳೆ ಅಭಿಮಾನಿಗಳ ಬಳಗ, ಮಾನವ ಬಂಧುತ್ವ ವೇದಿಕೆಯಿಂದ ಕರೆಯಲಾಗಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ, ಅವರು ಮಾತನಾಡಿದರು.

ಕೇಂದ್ರ ಸರ್ಕಾರ ಇಡಿ ಮತ್ತು ಸಿಬಿಐ ದುರ್ಬಳಕೆ ಮಾಡಿಕೊಂಡು ಕರ್ನಾಟಕದ ಗೌರವಾನ್ವಿತ ಸಚಿವರು ಮತ್ತು ಮಾನವ ಬಂಧುತ್ವ ವೇದಿಕೆಯ ಸಂಸ್ಥಾಪಕರಾದ ಸತೀಶ್ ಜಾರಕಿಹೊಳೆ ರವರ  ಹೆಸರಿಗೆ ಕಪ್ಪು ಮಸಿ ಬಳಿಯುವ ಕೆಲಸವನ್ನು ಮಾಡುತ್ತಿದೆ, ಅವರ ಇಲಾಖೆಯಲ್ಲಿ ಅವರು ಭ್ರಷ್ಟಾಚಾರ ರಹಿತ ದಕ್ಷತೆಯ ಕಪ್ಪು ಚುಕ್ಕೆ ಇಲ್ಲದ ಕೆಲಸವನ್ನು ನೋಡಿ ಸಹಿಸಲಾರದೆ ದಾಳಿ ಮಾಡಿಸಿದ್ದಾರೆ,

ಅಲ್ಲದೆ ಅವರು ಬುದ್ಧ ಬಸವ ಅಂಬೇಡ್ಕರ್ ಅವರ ತತ್ವ ಸಿದ್ಧಾಂತದ ಅಡಿಯಲ್ಲಿ ಹರಿದು ಹಂಚಿಹೋಗಿರುವ ಕೋಮುದಳ್ಳಿಯರಿಂದ ಬೇಯುತ್ತಿರುವ ಸಮಾಜಕ್ಕೆ ಸಂಜೀವಿನಿಯಂತೆ ಕೆಲಸ ಮಾಡುತ್ತಿದ್ದಾರೆ, ಇಂತಹವರನ್ನು ಮುನ್ನಡೆಗೆ ತಂದು ಇಡೀ ಕುಟುಂಬವನ್ನೇ ಕಾನೂನಿನ ಕುಣಿಕೆಯಲ್ಲಿ ಸಿಲುಕಿಸುವ ಕೆಲಸ ಮಾಡುತ್ತಿದ್ದು, ಇದು ನಿಲ್ಲಬೇಕು

ಇಲ್ಲವಾದಲ್ಲಿ ಕರ್ನಾಟಕದ ಸಮಸ್ತ ವಾಲ್ಮೀಕಿ ಸಮುದಾಯದ ಮತ್ತು ದಲಿತ ಸಮುದಾಯ ನಾಗರೀಕ ಬಂಧುಗಳು, ಸತೀಶ್ ಜಾರಕಿಹೊಳೆ ಅಭಿಮಾನಿಗಳ ಬಳಗದವರು ಮುಂದಿನ ದಿನಗಳಲ್ಲಿ ಇವರಿಗೆ ತಕ್ಕ ಪಾಠವನ್ನು ಕಲಿಸಲಿದ್ದಾರೆ ಎಂದು ಆಕ್ರೋಶ ಭರಿತವಾಗಿ ಹೇಳಿದರು.

ಈ ಸಂದರ್ಭದಲ್ಲಿ ಮಾನವ ಬಂಧುತ್ವ ವೇದಿಕೆ ಹಿರಿಯೂರು ತಾಲ್ಲೂಕು ಅಧ್ಯಕ್ಷರಾದ ಹೆಚ್.ಎಸ್.ಮಾರುತೇಶ ಕೂನಿಕೆರೆ, ವಾಲ್ಮೀಕಿ ಸಮಾಜದ ಹಿರಿಯ ಮುಖಂಡರಾದ ಜೋಗಪ್ಪ, ಕೊಟ್ಟಿಗೆ ಪೂಜಾನಾಯಕ, ಹೆಚ್.ಮಂಜುನಾಥ್, ಪ್ರಸನ್ನ ಟಿವಿ ಸರ್ಕಲ್, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿಶನ್ ಹಾಗೂ ಶರತ್ ತೊರೆಒಬೇನಹಳ್ಳಿ ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *