September 12, 2026
0000001

ಹಿರಿಯೂರು :

ಶೀಘ್ರದಲ್ಲೇ ನಡೆಯಲಿರುವ ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನುಗೆಲ್ಲಿಸುವ ಮೂಲಕ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರ ಕೈ ಬಲಪಡಿಸಬೇಕು ಎಂಬುದಾಗಿ ರಾಜ್ಯದ ಪೌರಾಡಳಿತ ಸಚಿವರಾದ ಹೆಚ್.ಸಿ.ಬಾಲಕೃಷ್ಣ ಹೇಳಿದರು.

ನಗರದ ಹೊರವಲಯದಲ್ಲಿರುವ ಮುನ್ನಾ ಪಾರ್ಮ್ ಹೌಸ್ ನಲ್ಲಿ ವಾಸ್ತವ್ಯ ಹೂಡಿದ್ದ ಸಚಿವರು ಬುಧವಾರ ಬೆಳಗ್ಗೆ ನಗರದ ವೈದ್ಯರ ತಂಡದೊಂದಿಗೆ ಔಷಚಾರಿಕವಾಗಿ ಚರ್ಚಿಸಿ, ಮಾತನಾಡಿದರು.

ಮಾನ್ಯ ಮಾಜಿ ಮುಖ್ಯಮಂತ್ರಿಗಳಾಗಿದ್ದ ಸಿದ್ಧರಾಮಯ್ಯನವರ ಅವಧಿಯಲ್ಲಿ ಸುಮಾರು 6 ಉಪಚುನಾವಣೆಗಳನ್ನು ಕಾಂಗ್ರೆಸ್ ಪಕ್ಷ ಗೆದ್ದಿದ್ದು, ಡಿ.ಕೆ.ಶಿವಕುಮಾರ್ ರವರು ಮುಖ್ಯಮಂತ್ರಿಗಳಾಗಿರುವ ಸಂದರ್ಭದಲ್ಲಿ ಬಂದಿರುವ ಮೊದಲ ಉಪಚುನಾವಣೆ ಇದಾಗಿದ್ದು, ಿದನ್ನು ಗೆಲ್ಲದಿದ್ದರೆ ನಮ್ಮ ಸರ್ಕಾರಕ್ಕೆ ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರಿಗೆ ಅವಮಾನವಾದಂತಾಗುತ್ತದೆ

ಆದ್ದರಿಂದ ನಾವೆಲ್ಲಾ ಈ ಚುನಾವಣೆಯನ್ನು ಪ್ರತಿಷ್ಠೆಯ ವಿಷಯವಾಗಿ ತೆಗೆದುಕೊಂಡಿದ್ದು, ಧರ್ಮಪುರ ಹೋಬಳಿಯನ್ನು ಉಸ್ತುವಾರಿಯಾಗಿ ಹಾಕಿದ್ದು, ನಾವು ಈ ಉಪಚುನಾವಣೆಯನ್ನು ಗೆಲ್ಲಲೇ ಬೇಕಾಗಿದ್ದು, ಇದಕ್ಕೆ ನಿಮ್ಮೆಲ್ಲರ ಸಹಕಾರವಿರಲಿ ಎಂದರಲ್ಲದೆ,

ಕಾಂಗ್ರೆಸ್ ಅಭ್ಯರ್ಥಿಯಾಗಿ ಯಾರನ್ನು ಆಯ್ಕೆ ಮಾಡಿದ್ದೀರಿ, ಎಂಬುದಾಗಿ ಕೇಳಿದ ಪ್ರಶ್ನೆಗೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಸಲಹೆ ಸೂಚನೆಗಳನ್ನು ಪಡೆದು, ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು, ಎಂಬುದಾಗಿ ಮಾರ್ಮಿಕವಾಗಿ ಮುಗುಳ್ನಕ್ಕು ಉತ್ತರಿಸಿದರು.

ಈ ಸಂದರ್ಭದಲ್ಲಿ ಕುಣಿಗಲ್ ಕ್ಷೇತ್ರದ ಶಾಸಕರಾದ ಡಾ.ರಂಗನಾಥ್, ಹಾಗೂ ನಗರದ ಹೆಸರಾಂತ ವೈದ್ಯರುಗಳಾದ ಸಂಜೀವಿನಿ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ.ರಾಮಚಂದ್ರಪ್ಪ, ವಿನಾಯಕ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ.ರಘು, ಹರ್ಷ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ.ಹರ್ಷವರ್ಧನ್, ಬಸವರಾಜ್ ಆಸ್ಪತ್ರೆಯ ಸಚಿನ್ ಗೌಡರು, ಸೇರಿದಂತೆ ವಿ.ಟಿ.ತಿಪ್ಪೇಸ್ವಾಮಿ, ಮುದ್ದುವೀರಪ್ಪ, ಗೋಪಾಲ್, ಕಾಂಗ್ರೆಸ್ ಮುಖಂಡರಾದ ಅಮೃತೇಶ್ವರಸ್ವಾಮಿ, ಫಾರ್ಮ್ ಹೌಸ್ ಮಾಲೀಕರಾದ ಮುನ್ನಾ, ಇತರರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *