
ಹಿರಿಯೂರು :
ತಾಲ್ಲೂಕಿನ ಯರಬಳ್ಳಿ ಗ್ರಾಮದ ಬರ ಪೀಡಿತ ಪ್ರದೇಶಗಳಿಗೆ ಇಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ಖುದ್ದಾಗಿ ಭೇಟಿ ನೀಡಿ, ಮಣ್ಣಿನ ಗುಣಮಟ್ಟ ಹಾಗೂ ಬೆಳೆಗಳ ಬೆಳವಣಿಗೆಯನ್ನು ಪರಿಶೀಲಿಸಿ, ಬರ ಪರಿಸ್ಥಿತಿ ಕುರಿತು ಅಧಿಕಾರಿಗಳು ಹಾಗೂ ರೈತರಿಂದ ಮಾಹಿತಿ ಪಡೆದುಕೊಂಡರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಜಮೀನಿನ ರೈತರೊಂದಿಗೆ ಆತ್ಮೀಯತೆಯಿಂದ ಮಾತನಾಡಿ, ಕುಶಲೋಪರಿ ವಿಚಾರಿಸಿದರಲ್ಲದೆ, ತಾವು ತಮ್ಮ ಜಮೀನಿನಲ್ಲಿ ಯಾವ ಯಾವ ಬೆಳೆ ಇಟ್ಟಿದ್ದೀರಾ ಎಂಬುದರ ಬಗ್ಗೆ ಹಾಗೂ ಬೆಳೆಗೆ ತಗುಲಿದ ಖರ್ಚು ವೆಚ್ಚಗಳ ಬಗ್ಗೆ, ಈ ಭಾಗದಲ್ಲಿ ಮಳೆ ಎಷ್ಟು ಸಾರಿ ಬಂದಿದೆ ಎಂಬ ಬಗ್ಗೆ ಹಾಗೂ ತಮ್ಮ ಬೆಳೆಗೆ ಬೆಳೆವಿಮೆ ಮಾಡಿಸಿರುವ ಬಗ್ಗೆ ಜಮೀನಿನ ರೈತರಿಂದ ವಿವರವಾದ ಮಾಹಿತಿ ಪಡೆದು, ರೈತರೊಂದಿಗೆ ಚರ್ಚಿಸಿದರಲ್ಲದೆ, ರೈತರಿಗೆ ಧೈರ್ಯ ತುಂಬಿದರು.

ಈ ವೇಳೆ ಉಪಮುಖ್ಯಮಂತ್ರಿಗಳಾದ ಡಾ.ಜಿ.ಪರಮೇಶ್ವರರವರು ಹಾಗೂ ಸಚಿವರಾದ ಈಶ್ವರ ಖಂಡ್ರೆ, ಶಾಸಕರಾದ ಟಿ.ರಘುಮೂರ್ತಿ, ಬಿಜಿ.ಗೋವಿಂದಪ್ಪರವರು ಕೆ.ಸಿ.ವೀರೇಂದ್ರಪಪ್ಪಿ, ಡಿ.ಟಿ.ಶ್ರೀನಿವಾಸ್, ಮಾಜಿ ಶಾಸಕರಾದ ಪೂರ್ಣಿಮಾಶ್ರೀನಿವಾಸ, ನಿಗಮ ಮಂಡಳಿ ಅಧ್ಯಕ್ಷರಾದ ಜಿ.ಎಸ್.ಮಂಜುನಾಥ್, ರಘು, ಯೋಗೀಶ್ ಬಾಬು, ತಾಜಪೀರ್, ಕಾಂಗ್ರೇಸ್ ಮುಖಂಡರಾದ ಸುಹಾಸ್ ಸುಧಾಕರ್, ಸ್ಥಳೀಯ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು, ರೈತ ಮುಖಂಡರು ಹಾಗೂ ರೈತ ಬಾಂಧವರು ಉಪಸ್ಥಿತರಿದ್ದರು.
