
ಹಿರಿಯೂರು :
ತಾಲ್ಲೂಕಿನ ಕೂನಿಕೆರೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಕೂನಿಕೆರೆ ಕಾಲೋನಿಯಲ್ಲಿ ಮುಖ್ಯದ್ವಾರ ಬಾಗಿಲು ಚರಂಡಿ ಕಟ್ಟಿಕೊಂಡು ಚರಂಡಿಯ ಕೊಳಕು ನೀರು ಪೈಪ್ ಭರ್ತಿಯಾಗಿ ಅದರ ಗಲೀಜ್ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ಪ್ರತಿದಿನ ಶಾಲೆಗೆ ಹೋಗುವ ಮಕ್ಕಳಿಗೆ ತುಂಬಾ ತೊಂದರೆಯಾಗುತ್ತಿದೆ ಎಂಬುದಾಗಿ ಹೆಚ್.ಎಸ್.ಮಾರುತೇಶ್ ಕೂನಿಕೆರೆ ಬೇಸರ ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲ ರೈತರು, ದನಕರುಗಳಿಗೆ ಮೇವು ತರುವಾಗ ದ್ವಿಚಕ್ರ ವಾಹನಗಳು ಜಾರಿ ಹಲವಾರು ಬಾರಿ ರೈತರು ಬಿದ್ದಿದ್ದಾರೆ, ಅಷ್ಟೇ ಅಲ್ಲ ದನಕರಗಳು ಆ ಭಾಗದಲ್ಲಿ ದಾಟಿಕೊಂಡು ಹೋಗುವಾಗ ಅದೇ ಕೊಳಕ ನೀರನ್ನು ಕುಡಿಯಲು ಮುಂದಾಗುತ್ತವೆ, ಜೊತೆಗೆ ಅಕ್ಕಪಕ್ಕದ ಮನೆಯವರಿಗೆ ಅದರ ಚರಂಡಿ ವಾಸನೆಯಿಂದ ಮನೆಯಲ್ಲಿ ಮಕ್ಕಳಿಗೆ ಹಾಗೂ ಪೋಷಕರಿಗೆ ಅನಾರೋಗ್ಯಗಳು ಕಾಣಿಸಿಕೊಳ್ಳುತ್ತಿವೆ,
ಈಗಾಗಲೇ ಗ್ರಾಮಪಂಚಾಯಿತಿಗೆ ಎರಡು ಮೂರು ಬಾರಿ ತಿಳಿಸಿ, ಫೋಟೋ ಹಾಗೂ ವಿಡಿಯೋಗಳನ್ನು ಅವರ ವಾಟ್ಸಪ್ ಗಳಿಗೆ ಕಳಿಸಿದ್ದರೂ ಯಾವುದೇ ಪ್ರಯೋಜನ ಆಗದೆ ಇರುವುದರಿಂದ ಸಂಬಂಧಪಟ್ಟಂತಹ ತಾಲೂಕು ಕಾರ್ಯನಿರ್ವಹಣಾ ಅಧಿಕಾರಿಗಳು ಕೂನಿಕೆರೆ ಗ್ರಾಮಕ್ಕೆ ಆಗಮಿಸಿ ಕಾಲೋನಿಯಲ್ಲಿ ಇರುವ ಈ ಸಮಸ್ಯೆಯನ್ನು ಪರಿಹರಿಸಬೇಕು.
ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳ ಜೊತೆ ಚರ್ಚಿಸಿ ಈ ಚಂಡಿಯ ಕೊಳಕು ನೀರು ಹಾಗೂ ಚರಂಡಿ ಕಟ್ಟಿಕೊಂಡಿರುವ ಈ ಕೆಲಸ ಮಾಡಿಸಿ ಗ್ರಾಮದ ಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ, ರೈತರಿಗೆ ಆರೋಗ್ಯದಾಯಕ ಗ್ರಾಮವನ್ನಾಗಿ ಮಾಡಬೇಕೆಂದು ಪತ್ರಕರ್ತರು ಹಾಗೂ ಕಲಾವಿದರಾದ ಹೆಚ್.ಎಸ್.ಮಾರುತೇಶ ಕೂನಿಕೆರೆ ಒತ್ತಾಯಿಸಿದ್ದಾರೆ.
