
ಹಿರಿಯೂರು
ಜುಲೈ 22ರ ರಾತ್ರಿ 9:00 ರಿಂದ ಪಂಪ್ ಹೌಸ್ನಲ್ಲಿ ಟಿಸಿ ಕೆಟ್ಟುಹೋಗಿರುವುದರಿಂದ, ನೀರು ಪಂಪಿಂಗ್ ಕಾರ್ಯ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಒಂದು ದಿನ ವಿಳಂಬ ಉಂಟಾಗಲಿದೆ ಕಾರಣ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂಬುದಾಗಿ ನಗರಸಭೆ ಪೌರಾಯುಕ್ತರಾದ ಎ.ವಾಸಿಂರವರು ಸಾರ್ವಜನಿಕರಿಗೆ ತಿಳಿಸಿದ್ದಾರೆ.

ಈ ದಿನ ನೀರು ಬಿಡುವ ಪ್ರದೇಶಗಳಲ್ಲಿ ನಾಳೆ ನೀರು ಸರಬರಾಜು ಮಾಡಲಾಗುವುದು, ನಾಳೆ ಬಾಕಿ ಇರುವ ಪ್ರದೇಶಗಳಲ್ಲಿ ನಾಡಿದ್ದು, ನೀರು ಸರಬರಾಜು ಮಾಡಲಾಗುವುದು, ನಾಡಿದ್ದು ಬಾಕಿ ಇರುವ ಪ್ರದೇಶಗಳಲ್ಲಿ ಅಚ್ಚ ನಾಡಿದ್ದು ನೀರು ಸರಬರಾಜು ಮಾಡಲಾಗುವುದು, ಒಂದು ದಿನ ನೀರಿನ ವ್ಯತ್ಯಾಸ ಉಂಟಾಗುವುದರಿಂದ ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

