
ಹಿರಿಯೂರು :
ಜೀನ್ ಹೆನ್ರಿ ಡ್ಯೂಸಾಂಟ್ ರೆಡ್ ಕ್ರಾಸ್ ಸಂಸ್ಥಾಪಕರು ಜನ್ಮದಿನ ಮತ್ತು ವಿಶ್ವ ರೆಡ್ ಕ್ರಾಸ್ ದಿನಾಚರಣೆ ಪ್ರಯುಕ್ತ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಮತ್ತು ಅವರ ಸಹಾಯಕರಿಗೆ ಹಾಗೂ ಹೊರರೋಗಿಗಳಿಗೆ ಮದ್ಯಾಹ್ನದ ಉಚಿತ ಆಹಾರ ಹಾಗೂ ಬಿಸಿಲಿನ ತಾಪಕ್ಕಾಗಿ ಮಜ್ಜಿಗೆಯನ್ನು ವಿತರಿಸಲಾಗುತ್ತಿದೆ ಎಂಬುದಾಗಿ ರೆಡ್ ಕ್ರಾಸ್ ಚೇರ್ಮನ್ ಹೆಚ್.ಎಸ್.ಸುಂದರ್ ರಾಜ್ ಹೇಳಿದರು.

ನಗರದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಆಹಾರ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ನಂತರ ಅವರು ಮಾತನಾಡಿದರು.
ರೆಡ್ ಕ್ರಾಸ್ ಮತ್ತು ರೋಟರಿ ದಾನಿಗಳ ಸಹಕಾರದಲ್ಲಿ ವಿಶೇಷವಾಗಿ ವಾರದಲ್ಲಿ ಭಾನುವಾರದ ಹೊರತಾಗಿ ಪ್ರತಿದಿನ ಮದ್ಯಾಹ್ನ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹೊರರೋಗಿಗಳಿಗೆ ಉಚಿತವಾಗಿ ಉಪಹಾರ ನೀಡಲಾಗುತ್ತಿದೆ, ಪ್ರತಿದಿನ ಸುಮಾರು 250 ರಿಂದ 300 ಜನರಿಗೆ ಉಚಿತ ಉಪಹಾರ ನೀಡಲಾಗುತ್ತಿದೆ, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂಬುದಾಗಿ ಅವರು ಕರೆ ನೀಡಿದರು.

ಈ ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ಚೇರ್ಮನ್ ಹೆಚ್.ಎಸ್.ಸುಂದರ್ ರಾಜ್, ವೈಸ್ ಚೇರ್ಮನ್ ಎ.ರಾಘವೇಂದ್ರ, ಕಾರ್ಯದರ್ಶಿ ಎಂ.ಎಸ್.ರಾಘವೇಂದ್ರ, ಹೆಚ್.ಎಸ್.ನಾಗರಾಜ್ ಗುಪ್ತಾ, ಎಸ್.ಜೋಗಪ್ಪ, ಸಣ್ಣಭೀಮಣ್ಣ, ಹಿರಿಯ ಪತ್ರಕರ್ತರಾದ ಆಲೂರುಹನುಮಂತರಾಯಪ್ಪ, ಪಿ.ಆರ್.ಸತೀಶ್ ಬಾಬು, ಹರ್ಷ, ರವಿಜನೌಷಧಿ, ಪರಮೇಶ್ವರಭಟ್, ದೇವರಾಜ್ ಮೂರ್ತಿ, ರಂಗನಾಥಪ್ಪ, ಶಶಿಕಲಾರವಿಶಂಕರ್, ಗೀತಾರಾಧಾಕೃಷ್ಣ, ನಾಗಸುಂದರಮ್ಮ, ಸುಬ್ಬಣ್ಣಶೆಟ್ಟಿ, ಸರಸ್ವತಿನಾಗರಾಜ್, ಶೋಭಾನಾಗರಾಜ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
