
ಹಿರಿಯೂರು :
ನಗರದ ಹೆಸರಾಂತ ಮೂಳೆರೋಗ ತಜ್ಞರಾದ ಡಾ.ಶ್ರೀಪತಿರವರು ಬುಧವಾರ ಬೆಳಗಿನ ಜಾವ ನಿಧನರಾಗಿದ್ದಾರೆ, ಸರ್ಕಾರಿ ವೈದ್ಯರಾಗಿ, ಜಿಲ್ಲಾ ಹೆಲ್ತ್ ಆಫೀಸರ್ ಆಗಿ, ರೋಟರಿ ಮತ್ತು ತಾಲ್ಲೂಕು ವೈದ್ಯರ ಸಂಘದ ಸ್ಥಾಪಕ ಅಧ್ಯಕ್ಷರಾಗಿ, ವೇದಾಬ್ಯಾಂಕ್ ಅಧ್ಯಕ್ಷರಾಗಿ ಜನಪ್ರಿಯತೆ ಗಳಿಸಿದ ಡಾ.ಶ್ರೀಪತಿರವರ ನಿಧನವು ವೈದ್ಯಕೀಯ ರಂಗಕ್ಕೆ ತುಂಬಲಾರದ ನಷ್ಟವಾಗಿದೆ ಎಂಬುದಾಗಿ ರೆಡ್ ಕ್ರಾಸ್ ಚೇರ್ಮನ್ ಹೆಚ್.ಎಸ್.ಸುಂದರ್ ರಾಜ್ ಸಂತಾಪ ಸೂಚಿಸಿದರು.
ನಗರದ ರೋಟರಿ ಸಭಾಭವನದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ರೋಟರಿ ಸಂಸ್ಥೆ ಸರ್ವೋದಯ ಬ್ರಹ್ಮಜ್ಞಾನ ಸಮಾಜ, ಲಯನ್ಸ್ ಐ ಹಾಸ್ಪೆಟಲ್ ಬೆಂಗಳೂರು, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಮತ್ತು ಜಿಲ್ಲಾ ಅಂಧತ್ವ ನಿವಾರಣಾ ಸಮಿತಿ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ತಜ್ಞ ವೈದ್ಯರಾದ ಡಾ.ಶ್ರೀಪತಿರವರ ನಿಧನದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಸಂತಾಪಸೂಚಕ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ರೆಡ್ ಕ್ರಾಸ್ ಚೇರ್ಮನ್ ಹೆಚ್.ಎಸ್.ಸುಂದರ್ ರಾಜ್, ವೈಸ್ ಚೇರ್ಮನ್ ಎ.ರಾಘವೇಂದ್ರ, ಕಾರ್ಯದರ್ಶಿ ಎಂ.ಎಸ್.ರಾಘವೇಂದ್ರ, ಯೂತ್ ರೆಡ್ ಕ್ರಾಸ್ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ ರವಿಶಂಕರ್, ಎಲ್.ಆನಂದಶೆಟ್ಟಿ, ಸಣ್ಣಭೀಮಣ್ಣ, ಪಿ.ಆರ್.ಸತೀಶ್ ಬಾಬು, ನಾಗಸುಂದರಮ್ಮಸುಬ್ಬಣ್ಣಶೆಟ್ಟಿ, ಪಾರ್ವತಮ್ಮ, ಸೌಮ್ಯಸುರೇಶ್, ಶೋಭಾ ನಾಗರಾಜ್, ರೋಟರಿ ಕಾರ್ಯದರ್ಶಿ ವಿಕಾಸ್ ಜೈನ್, ಧನರಾಜ್ ಜೈನ್, ಹೆಚ್.ವೆಂಕಟೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
