April 18, 2026
4

ಹಿರಿಯೂರು:

ತಾಲ್ಲೂಕಿನ  ಆಲೂರು ಗ್ರಾಮದ ಶ್ರೀ ಆನಂದಾಶ್ರಮ ಮತ್ತು ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಶ್ರೀ ಸುಖಾನಭವಿ ಜಗನ್ನಾಥ ಸ್ವಾಮಿಗಳ 22ನೇ ವರ್ಷದ  ಪುಣ್ಯಾರಾಧನೆ  ಹಾಗೂ ರಕ್ಷಾ ಸುದರ್ಶನ ಹೋಮ ಮತ್ತು ವಿವಿಧ  ಧಾರ್ಮಿಕ ಕಾರ್ಯಕ್ರಮಗಳನ್ನು  ಮಾರ್ಚ್ 7ರಿಂದ 9ರವರೆಗೆ  ಮೂರು ದಿನಗಳ ಕಾಲ  ನಡೆಸಲು ತೀರ್ಮಾನಿಸಲಾಗಿದೆ ಎಂಬುದಾಗಿ  ಆಶ್ರಮದ  ಮುಖ್ಯಸ್ಥರಾದ  ಶ್ರೀಶಂಕರಾನಂದ ಸ್ವಾಮೀಜಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮಾರ್ಚ್ 7ರ ಶನಿವಾರ ಗಂಗಾಪೂಜೆ, ಧ್ವಜಾರೋಹಣ,  ಶ್ರೀಸುಖಾನುಭವಿ ಜಗನ್ನಾಥ  ಸ್ವಾಮಿಗಳ ಗದ್ದುಗೆ  ಪೂಜೆ 8ಗಂಟೆಯಿಂದ ಅಖಂಡ ಶಿವಪಂಚಾಕ್ಷರಿ ಮಹಾಮಂತ್ರ ಜಪ 8ರ ಭಾನುವಾರ ಬೆಳಗ್ಗೆ 7ಗಂಟೆಗೆ ಅಖಂಡ ಜಪದ ಮುಕ್ತಾಯವಾಗುತ್ತದೆ. ಎಂದರಲ್ಲದೆ,

ರುದ್ರಾಭಿಷೇಕ, ಸುದರ್ಶನ ಹೋಮ, ಪ್ರವಚನದ ನಂತರ ಪ್ರಸಾದ ವಿನಿಯೋಗ ಇರುತ್ತದೆ.ಮಾರ್ಚ್ 9ರ ಸೋಮವಾರ 10.30ಕ್ಕೆ ಪ್ರವಚನ ಕಾರ್ಯಕ್ರಮ ನಂತರ ಮಹಾಮಂಗಳಾರತಿ ಪ್ರಸಾದ ವಿನಿಯೋಗ ಇರುತ್ತದೆ ಎಂಬುದಾಗಿ ಅವರು ಹೇಳಿದರು.

ಅನೇಕ ಪೂಜ್ಯರು, ಸ್ವಾಮೀಜಿಗಳು ಹಾಗೂ ಮುಖಂಡರು ಈ ಕಾರ್ಯಕ್ರಮದಲ್ಲಿ  ಭಾಗವಹಿಸಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ  ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಸಹಕರಿಸುವಂತೆ  ಶಂಕರಾನಂದ ಸ್ವಾಮೀಜಿಗಳು ಮನವಿ ಮಾಡಿದ್ದಾರೆ.

ಮಾರ್ಚ್ 9ರ ಸೋಮವಾರ 10.30ಕ್ಕೆ ಪ್ರವಚನ ಕಾರ್ಯಕ್ರಮ ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗಿರುತ್ತದೆ. ಅನೇಕ ಸ್ವಾಮೀಜಿಗಳು  ಹಾಗೂ ಮುಖಂಡರುಗಳು  ಕಾರ್ಯಕ್ರಮದಲ್ಲಿ  ಭಾಗವಹಿಸಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಸಹಕರಿಸುವಂತೆ ಸ್ವಾಮಿಗಳು  ಮನವಿ ಮಾಡಿದ್ದಾರೆ.

About The Author

Leave a Reply

Your email address will not be published. Required fields are marked *